ಯಾಂತ್ರಿಕತೆ ................................
ಭಾವನೆಗಳಿಗೆ ಇತ್ತೀಚಿಗೆ ಬೆಲೆಯೇ ಇಲ್ಲ.....ಈಗಿನ ಮಕ್ಕಳು ತುಂಬಾ ಜೋರು.... ಎಂದೆಲ್ಲ ಮಾತುಗಳು ನಾವು ಕೇಳುತ್ತಿರುವುದು ಸಹಜ....ಹಾಗೆದರೆ ಭಾವನೆಗಳು ಯಾಕಿಲ್ಲ....?
ಯಾವ ಮಕ್ಕಳು ಸಹ ಹುಟ್ಟುತ್ತಲೇ ಎಲ್ಲವನ್ನು ಕಲಿತು ಬರುವುದಿಲ್ಲ......ಅವರು ಬೆಳೆಯುತ್ತಾ ಕಲಿಯುತ್ತಾರೆ. ಹಾಗದರೆ ಬೆಳೆಸುವ ರೀತಿಯಲ್ಲಿ ನಮ್ಮಿಂದ ಕಲಿಯುತ್ತಾರೆಲ್ಲವೆ? ನಾವೇಷ್ಟು ಮಕ್ಕಳಿಗೆ ಭಾವನೆಗಳ ಬಗ್ಗೆ ಕಲಿಸಿಕೊಡುತ್ತೇವೆ?
ಮಗುವಿಗೆ ಹಿಂದಿನ ಕಾಲದಲ್ಲಿ ಅಮ್ಮ ತೊಟ್ಟಿಲಲ್ಲಿ ಹಾಕಿ ತೂಗುತ್ತಾ ಮಗುವನ್ನು ಜೋಗುಳ ಹಾಡಿ ಮಲಗಿಸುತ್ತಿದ್ದಳು. ಅವಳ ಹಾಡನ್ನು ಕೇಳುತ್ತಾ... ನಿದಿರೆಗೆ ಜಾರುವುದು ಮಗುವಿನ ಅಭ್ಯಾಸವಾಗಿತ್ತು. ಆದರೆ ಈಗ ಮಗುವನ್ನು ವಿದ್ಯುತ್ ತೊಟ್ಟಿಲಲ್ಲಿ ಮಲಗಿಸಿ ( ಸ್ವಿಚ್ ಹಾಕಿದ ತಕ್ಷಣ ತೊಟ್ಟಿಲು ತೂಗುತ್ತದೆ) ಸಿ.ಡಿ. ಹಾಕಿದರೆ ತಕ್ಷಣ ಇಂಪಾದ ಹಾಡುಗಳು .......
ಅಮ್ಮ , ಅಪ್ಪ ಮಕ್ಕಳನ್ನು ಎತ್ತಿಕೊಂಡು, ತಬ್ಬಿಕೊಂಡು ಮಗುವಿನೊಂದಿಗೆ ಮಾತಾಡುತ್ತಾ.... ಅದರ ತೊದಲು ನುಡಿಯ ಪ್ರಶ್ನೆಗೆ ಅಥ೯ ಕಲ್ಪಿಸುತ್ತಾ ಅದಕ್ಕೆ ಉತ್ತರ ಕೊಡುತ್ತಾ ದಾರಿಯಲ್ಲಿ ನಡೆಯುವುದು ಅದೆಷ್ಟು ಚೆನ್ನ... ಆದರೆ ಈಗ ಮಗುವನ್ನು ಗಾಡಿಯಲ್ಲಿ ನೂಕುತ್ತಾ....ಮಗು ಅದರ ಪಾಡಿಗೆ ನಾವು ನಮ್ಮ ಪಾಡಿಗೆ ..ಅದರ ಕುತೂಹಲದ ಮಾತಿಲ್ಲ ಕತೆಯಿಲ್ಲ...
ಮಗು ನಡೆಯುವಾಗ ಬೀಳುವಾಗ ಕೆಲಸಾದಕೆಯೆ ಅಮ್ಮ , ಅಪ್ಪ , ...........ಹಾಗದರೆ ಅವರ ಅಪ್ಪ ಅಮ್ಮನ ಅಜ್ಜ ಅಜ್ಜಿಯ ಪ್ರೀತಿ ಎಲ್ಲಿದೆ?
ಎಲ್ಲವೂ ಯಾಂತ್ರಿಕವಾಗಿರುವಾಗ ಮಗು ಭಾವನೆಯನ್ನು ಕಲಿಬೇಕೆನ್ನುವುದರಲ್ಲಿ ಅರ್ಥವಿದೆಯ ?