Pages

Friday, March 21, 2025

The Unseen Journey: Life of Parents Raising Children with Special Needs

Parenting is a journey filled with love, joy, and challenges. But for parents raising children with special needs, this journey is far more complex, requiring immense strength, patience, and resilience. Their life is not just about parenting—it’s about being an advocate, therapist, teacher, and an unwavering source of support for their child.


A Life of Constant Care

From the moment they wake up, parents of children with special needs step into a role that demands their complete attention. Every day revolves around therapies, doctor visits, special education planning, and ensuring their child’s well-being. While other parents may take daily routines for granted, these parents must carefully plan every step to accommodate their child’s unique needs.

Simple tasks—like feeding, dressing, or communication—may take much longer, requiring endless patience and creativity. Sleep deprivation is common, as many children with special needs have irregular sleep patterns. Yet, no matter how exhausted they feel, parents push forward with unwavering determination.

The Emotional Rollercoaster

The emotional journey of raising a child with special needs is deeply personal and often misunderstood. Many parents experience a mix of emotions—love, joy, frustration, sadness, and fear. They celebrate small milestones that others might overlook, knowing the immense effort behind each achievement.

At the same time, there is an unspoken grief—not because they do not love their child, but because they sometimes mourn the ease of life their child may never have. Questions like Will my child ever be independent? Will society accept them? What will happen when I’m no longer around? haunt them daily.

The Loneliness and Social Challenges

Parenting a child with special needs can feel isolating. Social gatherings become challenging, and invitations from friends and relatives may become less frequent. People may not always understand the difficulties, and insensitive remarks can be painful.

However, this journey also teaches them the value of true friendship. They learn to cherish those who offer genuine support, who check in without judgment, and who embrace their child without hesitation.

The Unbreakable Strength of a Parent

Behind every child with special needs is a parent who has transformed into a warrior. They become experts in medical jargon, fight for inclusive education, and stand strong in the face of societal bias. They learn to navigate bureaucracy, push for better facilities, and educate those around them about their child’s abilities rather than their limitations.

Despite their exhaustion and worries, they never stop hoping, never stop believing, and never stop loving. Their strength is extraordinary—not because they had a choice, but because their child needs them to be strong.

A Love Like No Other

At the heart of it all is a love that knows no limits. Every struggle, every sleepless night, every battle fought is fueled by an unconditional love that only a parent can understand. Their child may not always express gratitude in words, but every hug, smile, or moment of progress is a reminder that their love and sacrifices are making a difference.

A Message to Society: Be the Change

As a society, we must ask ourselves: Are we making life easier or harder for families raising children with special needs? Do we offer a helping hand, or do we turn away?

Inclusion begins with awareness. Educate yourself and your children about disabilities. Teach them to be kind, accepting, and understanding.

Choose empathy over judgment. Instead of staring or making assumptions, offer support. A simple smile or a kind word can make a difference.

Support, don’t exclude. Invite families with special needs children to gatherings, playdates, and events. Small gestures can help them feel included and valued.

Advocate for accessibility. Whether it’s in schools, workplaces, or public spaces, push for policies that support individuals with special needs and their families.

A Message to Parents

To every parent raising a child with special needs: You are seen. You are valued. Your journey is not easy, but the love you give is shaping a more compassionate and inclusive world. You are not alone, and your efforts are changing lives—one small victory at a time.

Together, as a community, we can build a world where every child, regardless of their abilities, is accepted, supported, and celebrated.

Tuesday, February 19, 2013

ಮತ್ತಾಡುವ ಆಸೆ

ಮತ್ತೆ ಮಗುವಾಗಬೇಕೆಂಬ ಆಸೆ ...
ನನ್ನದೆ ಲೋಕದಲ್ಲಿ ತೆಲಾಡುವ ಆಸೆ...
ಅಮ್ಮನ ಮುದ್ದಿನ ಅಪ್ಪುಗೆಯ ಆಸೆ...
ಯಾವುದೆ ದೂರಾಚನೆಯಿಲ್ಲದೆ ಮತ್ತಾಡುವ ಆಸೆ ...
ಆದರೆ ಇಗ ಆ "ಬಾಲ್ಯ" ಸಿಗಲಾರದೆಂಬುದೆ ...
"ನಿರಾಸೆ"

Sunday, December 11, 2011

ಮರಿಚಿಕೆ

ಮನಸಿನ ಆಸೆ ..
ಆಗಿರುವುದು ನಿರಾಸೆ
ಮರಿಚಿಕೆಯಾಯಿತೆ ಮನದಾಸೆ ..

ಮತ್ಯಾವುದೋ ಕನಸು ..
ಆದಾಗದು ಎಂದಿಗೂ ನನಸು ...
ಮರಿಚಿಕೆಯಾಯಿತೆ ಕನಸು ...

ಮರೆತರೂ ಮರೆಯಲಾಗದ ನೆನಪು ..
ಕಾಡುತಿದೆ ಕಹಿನೆನಪು..
ಮರಿಚಿಕೆಯಾಯಿತೆ  ಸಿಹಿ ನೆನಪು...

ಮತ್ಯಾಕೋ ಇನ್ನಷ್ಟು ಹಂಬಲ..
ಮುಂದೆ ಸಾಗಲೇಬೇಕೆಂಬ ಛಲ..
ಮರಿಚಿಕೆಯಾಗದಿರಲಿ ಆ ಫಲ...


(ಅದೆಷ್ಟೋ  ದಿನಗಳ ನಂತರದ ಒಂದು ಪುಟ್ಟ  ಪ್ರಯತ್ನ)


Tuesday, July 19, 2011

"ಸ್ವಾಮಿ ನಾವಿರೋದೇ ಹೀಗೆ"!!!!!

ನನಗೆ ಇತ್ತೀಚಿನ ದಿನಗಳಲ್ಲಿ ಯಾಕೊ ದಪ್ಪದವರನ್ನು ನೋಡಿದ್ರೆ " ಅಯ್ಯೋ ಪಾಪ" ಅನಿಸುತ್ತಿದೆ. ಯಾಕೆಂದ್ರೆ ನಾನು ಅವರ ಸಾಲಿನ ಮೊದಲ ಅಭ್ಯರ್ಥಿ! ಅವರ ಕಷ್ಟ ನಂಗೆ ಗೊತ್ತು ಸ್ವಾಮಿ!! ಒಂದು ಮದುವೆ ಮುಂಜಿಗೆ ಹೋಗಲಿಕ್ಕೆ ಇಲ್ಲ , ಅಲ್ಲಿ ಬಂದು ಬಳಗದವರು ಸಿಕ್ಕಿ ಕುಶೋಲೋಪರಿ ವಿಚಾರಿಸಿ"ನಿನ್ನ ಪರಿಚಯ ಆಗಲಿಲ್ಲ ಅಂತ ಅಂದಾಗ ನಮ್ಮ ಬಯೋಡಟಾ ಎಲ್ಲ ಹೇಳುವಷ್ಟರಲ್ಲಿ ಪಕ್ಕದಲ್ಲಿ ಕುಳಿತವರ  ಕಮೆಂಟ್ "ನೀನು ಈಗ ದಪ್ಪ ಆಗಿ ನಿನ್ನ ಪರಿಚಯವೇ  ಸಿಕ್ಲಿಲ್ಲ ". ಇನ್ನು ಕೆಲವರು " ನೀನು ದಪ್ಪ ಆಗಿದ್ದಿಯಲ್ಲ. ಮುಂಚೆ ನೀನು ತುಂಬಾ ಸಪೂರ ಇದ್ದಿಯಲ್ವಾ .....  ನೀನು ಸ್ವಲ್ಪ ಸಣ್ಣಗಿದ್ದರೆ ಚೆನ್ನಾಗಿರೋದು" ...ಎಂಬ ಉಚಿತ ಸಲಹೆ ಬೇರೆ.

ನನ್ನ ಗೆಳಯನೊಬ್ಬ ನಂಗೆ  " ಡುಮ್ಮಿ" ಎಂದು ನಾಮಕರಣ ಬೇರೆ ಮಾಡಿಬಿಟ್ಟಿದ್ದಾನೆ. ನನ್ನ ಪುಟ್ಟದಾದ ಹೆಸರಿಗೆ ಎಷ್ಟು ಬೇಸರ ಆಗಿರದು ಹೇಳಿ... ?
ನನ್ನ ಕೆಲ ಗೆಳೆಯರೋ " ನೀ ಯಾವ ಅಕ್ಕಿ ತಿನ್ನುತ್ತಿ ಮಾರಾಯ್ತಿ? ನಂಗೆ ಸಹ ಕಳುಹಿಸಿಕೊಡು..." ಅಂತಾರೆ ಕೀಟಲೆಗಾಗಿ.
ಇನ್ನು  ನನ್ನ ಅಂಟಿಯವರೋ " ಇಷ್ಟು ಸಣ್ಣ ಪ್ರಾಯಕ್ಕೆ ಹೀಗೆ ದಪ್ಪ ಆದ್ರೆ ಮತ್ತೆ  ಮತ್ತೆ ಬಿ.ಪಿ , ಶುಗರ್ ಬರುತ್ತೆ .. ಜಾಗ್ರತೆ ಮಾಡು. ಸ್ವಲ್ಪ ನಿನ್ನ ತೂಕ ಇಳಿಸು ಎಂದಾಗ ಹೂಂ ಎಂದು ನನ್ನ ತಲೆ ಅಲ್ಲಾಡಿಸುತ್ತೇನೆ.

ಇವರೆಲ್ಲರ  ಮಾತಿಗೆ ಪುಷ್ಟಿಯೊ ಎಂಬಂತೆ ಮೊನ್ನೆ ತುಂಬಿ ತುಳುಕುತ್ತಿದ್ದ  ಮಂಗಳೂರಿನ ಸೀಟಿ ಬಸ್ಸಿನಲ್ಲಿ ನಾನು ಹತ್ತಿದೆ, ಮುಂದಿನಿಂದ ಕಂಡೆಕ್ಟರ್ ಮಹಾಶಯ ಹಿಂದೆ ಹೋಗಿ ಅಂದ್ರೆ ಹಿಂದಿನಿಂದ ಕ್ಲಿನರ್ ಮಹಾಶಯ ಮುಂದೆ ಹೋಗಿ ಎಂದು  ಕಿರುಚಾಡುತ್ತಿದ್ದ. ನಾನೋ ಬಸ್ಸಿನಲ್ಲಿ ನನ್ನ ಪು(ದ)ಟ್ಟ ದೇಹವನ್ನು ಹೇಗಪ್ಪಾ ಸಂಭಾಳಿಸಲಿ. ಅದರೆಡೆಯಲ್ಲಿ ಸ್ಕೂಲ್ ಮಕ್ಕಳ ಬ್ಯಾಗ್ 9 ತಿಂಗಳ ಗರ್ಭಿಣಿಯಂತೆ ತುಂಬಿ ತುಳುಕುತಿತ್ತು. ಬಸ್ಸಿನಿಂದ ಇಳಿಯುವವರ ಕಣ್ಣುಗಳು ನನ್ನನ್ನು ಕೆಕ್ಕೆರಿಸಿ ನೋಡಿದಾಗ ನಂಗೆ ಎಲ್ಲಿಲ್ಲದ ಅಸಾಯಕತನ!.

ಹಾಗದರೆ ದಪ್ಪ ಆಗಿದ್ದು ನನ್ನ ಆಕ್ಷಮ್ಯ ಅಪರಾಧವೆ? ಹೌದು.....ಎನ್ನುತ್ತಿದೆ ನನ್ನ ಮನಸ್ಸು ಕೆಲವೊಮ್ಮೆ!.

ಕಡೆಗೂ ೧೫ ದಿನ  ಊಟ ಬಿಟ್ಟಾದರೂ ಸರಿ ಸಪೂರ ಆಗಲೇ ಬೇಕೆನ್ನುವ ಒಂದು ನಿರ್ಧಾರಕ್ಕೆ ಬಂದೆ. ಹಾಗೊ ಹೀಗೊ ಡಯೇಟ್ ಚಾರ್ಟ್ ತಂದೆ. ಅದರ ಪ್ರಕಾರ  1 ವಾರ ಬರೇ ಹಣ್ಣು ಹಂಪಲನ್ನು ತಿಂದು ಜೀವನ ಮಾಡಬೇಕಿತ್ತು.ಕಡೆಗೂ ಒಳ್ಳೆಯ ದಿನ ನೋಡಿ ನನ್ನ ಡಯಟ್ ನ್ನು ಶುರು ಹಚ್ಚಿಕೊಂಡೆ. ನನ್ನ ಪತಿರಾಯರು ಮತ್ತು ಮಗುವಿಗೆ ನನ್ನ ಕೈ ಆಡುಗೆಯನ್ನು ಚಾಚು ತಪ್ಪದೆ ಉಣಬಡಿಸಿದೆ. ಆದರೆ  ಅವರು ಉಟ ಮಾಡುವಾಗ ನಾನು ಮಾಡಿರುವ ಅಡಿಗೆ ರುಚಿ ಹೇಗಿರಬಹುದು ಎಂದು ಮನಸ್ಸಿಗೆ ಅನಿಸದಿರಲಿಲ್ಲ. ಹೇಗಾದರು ಆ  ದಿನ ನನ್ನ ಮನಸ್ಸನ್ನು ಹಿಡಿತದಲ್ಲಿ ಇರಿಸಿದೆ. ರಾತ್ರಿಯಾಗುವಷ್ಟರಲ್ಲಿ ನನ್ನ ಹಸಿವು ಹದಿನೈದು ದಿನ ಊಟಮಾಡದಿದ್ದ ಹಾಗೆ ಅನಿಸಿತು. ನಮ್ಮವರ ಊಟ ಮುಗಿಯುತಿದ್ದಂತೆ ಚೂರು ಪಾರು ಅನ್ನ ಸಾರು ಉಳಿದಿತ್ತು. ಭೀಮನ ಹೊಟ್ಟೆಗೆ ಕಾಸಿನ ಮದ್ದು! ಆ ಅನ್ನ ಸಾರಿಗೆ ಬೇಸರವಾಗಬಾರದಲ್ಲ! ಕಡೆಗೂ ನನ್ನ ಡಯಟ್ ಚಾರ್ಟ್ ನ್ನು  ಬದಿಗಿರಿಸಿ ಊಟ ಮಾಡಿದಾಗ ಆದ ಸಂತೋಷ ಹೇಳತೀರದು. ಸಂತೋಷ ನನಗಲ್ಲ ..ಅನ್ನ ಸಾರಿಗೆ ಮತ್ತು ನನ್ನ  ಹೊಟ್ಟೆಗೆ. ಯಾಕೆಂದ್ರೆ ಹೊಟ್ಟೆ ಹಸಿವು ಅಷ್ಟರ ಮಟ್ಟಿಗೆ ಇತ್ತು.ಹಾಗಗಿ ಇರುವ ಹಾಗೆಯೇ ಇರೋಣ ಎಂದು ಧ್ರಡ ಸಂಕಲ್ಪ ಮಾಡಿದ್ದೇನೆ.

 ನಾನು ಸಪೂರ ಆದಲ್ಲಿ ನನ್ನ ದಪ್ಪದಿಂದ ಆಗುವ ಕೆಲವು ಪ್ರಯೋಜನಗಳು ಇಲ್ಲದಾಗಬಹುದೆಂಬುದು ಈಗಿನ ನನ್ನ ವಾದ..ಯಾಕೆಂದ್ರೆ ಯಾವುದೇ ಸಭೆ ಸಮಾರಂಬಗಳಲ್ಲಿ ಎದ್ದು ಕಾಣುದು ದಪ್ಪದವರು ತಾನೇ? ಮಕ್ಕಳಿಗೆ " ಓ ದಪ್ಪದ ಅಂಟಿ ಕರಿಯಪ್ಪಾ " ಅಂದಾಗ ಮಗು ಚಾಚು ತಪ್ಪದೆ ನನ್ನ ಹತ್ತಿರ ಬಂದು ನನ್ನ ಕರಿಯುತ್ತೆ. ಪಾಪ ಅದಕ್ಕಾದರೂ ಉಪಕಾರ ನನ್ನ ದಪ್ಪದಿಂದ!
ಹಾಗಗಿ ನಾನು ದಪ್ಪವೇ ಇರೋಣ ಎಂಬ ನಿರ್ಧಾರಕ್ಕೆ ಬಂದೆ. ಯಾಕೆಂದರೆ "ಮದಗಜಗಮನೆ" ಎಂದು ಕರೆಯೋದು ದಪ್ಪದವರನ್ನೆ ತಾನೆ?

ಆದ್ರೆ  ನನ್ನ ಹೆಸರು ಬರೆದು ಮತ್ತು ನನ್ನ ದಪ್ಪದ ಬಗ್ಗೆ " ನೊ ಕಮೆಂಟ್ಸ್ ಪ್ಲೀಸ್ " ಎಂದು ಬೋರ್ಡ್ ಹಾಕುವಾಂತ ತಿರ್ಮಾನಕ್ಕೆ ಬಂದ್ದಿದ್ದೇನೆ....

ಯಾಕೆಂದ್ರೆ "ಸ್ವಾಮಿ ನಾವಿರೋದೇ  ಹೀಗೆ"!!!!!

Saturday, July 2, 2011

ನೋವಿನ ವಿದಾಯ



ಹುಚ್ಚು ಕುದುರೆ ಮನಸ್ಸು 
ಕಾಣುತ್ತಿತ್ತು ಕನಸು 
ಗೊತ್ತಿದ್ದರೂ ಆದಾಗದು
ಎಂದಿಗೂ  ನನಸು...

ಹೇಳಿದೆ ನೀ ಎನಗೆ  ಚೆನ್ನ..
ಕರೆದೆ ನಾ ನಿನ್ನ ಚಿನ್ನ 
ಕೊಟ್ಟೆ ನನ್ನ ಹ್ರದಯವನ್ನ 
ಮತ್ಯಾಕೆ  ದೂರ ತಳ್ಳಿದೆ ಎನ್ನ..?

ನೆನಪೊಂದು  ಬೆಂಬಿಡದ ಬೇತಾಳ
ಗಾಯ ನೋವುಗಳೆಲ್ಲ  ಬಹಳ ಆಳ...
ಉದುರುತಿದೆ ಕಣ್ಣೀರು ಕಣ್ಣಂಚಿನಲಿ
ಬೆಂದಿಹುದು ಮನ ನಿನ್ನ ಬಲೆಯ ಜಾಲದಲಿ...

ಮರೆತರೂ ಮರೆಯಲಾರದ ನೆನಪು 
ಮಾಡಿರುವೆಯಲ್ಲ್ಲ ಅಚ್ಚಳಿಯದ ಛಾಪು
ಆರ್ಭಟಿಸುತಿದೆ  ಮೌನದ ಅಲೆ
ಉರಿಯುತಿದೆ ಮನದೊಳಗೆ ಅಗ್ನಿಯ ಜ್ವಾಲೆ..

ಬೇಡವಾಗಿದೆ ನಿನ್ನ ಕಣ್ಣಮುಚ್ಚಾಲೆ
ಮಗದೊಮ್ಮೆ ತೋರಿಸದಿರು ನಿನ್ನ ಲೀಲೆ ..
ಕಾದಿಹೆನು ಸೂರ್ಯನ ಉದಯಕ್ಕಾಗಿ
ಮತ್ತೆ ಜೀವನದ ಹೊಸ ಹೆಜ್ಜೆಗಾಗಿ....









Thursday, June 23, 2011

ನೀವು ಕನಸು ಕಾಣುತ್ತೀರಾ???



ಕನಸು ಒಂದು ಅನುಭವ. ಸನ್ನಿವೇಶಗಳನ್ನು ನಿಜವಾಗಿಯೂ ಅನುಭವಿಸಿದ ಹಾಗೇ ಭಾಸವಾಗುತ್ತದೆ. ಧ್ವನಿ , ರುಚಿ,  ವಾಸನೆ .. ಇತ್ಯಾದಿ. ಕೆಟ್ಟ ಕನಸು ಕಂಡಾಗ  ಭಯದಲ್ಲಿ  ನಾವು ಬೆವರುತ್ತೇವೆ, ಬೇಸರದ ಕನಸು ಬಿದ್ದಾಗ ನಾವು ಅಳುತ್ತೇವೆ .. ಹೀಗೆ ಹಲವಾರು ರೀತಿಯಲ್ಲಿ ಕನಸು ಭಾಸವಾಗುತ್ತದೆ. ಮಕ್ಕಳಿಂದ  ಮುದುಕರವರೆಗೆ ಎಲ್ಲರೂ ಕನಸನ್ನು ಅನುಭವಿಸುತ್ತಾರೆ. ನಾಯಿ ಬೆಕ್ಕುಗಳು ಕೂಡ ಕನಸು ಕಾಣುತ್ತವೆ......
ಕನಸುಗಳು ಮನುಷ್ಯನ ಅನುಭವದ ಬಯಕೆಯ ಭಂಡಾರ.

 ನಾವು ಕಾಣುವ ಕನಸುಗಳಿಗೆ ಏನು ಅರ್ಥ? ಮೊನ್ನೆಯೊಬ್ಬರು ಹೇಳುವುದನ್ನು ಕೇಳಿಸಿಕೊಂಡೆ "  ಒಳ್ಳೆ ನಿದ್ರೆ   ಒಳ್ಳೆ ಕನಸು ಮಾರಾಯ್ರೆ ! ಅಷ್ಟರಲ್ಲಿ  ಮಗಳು ಬಂದು ಎಬ್ಬಿಸಿದಳು....ಕೆಲವರಂತೂ "ನಂಗೆ ರಾತ್ರಿ ನಿದ್ರೇನೆ ಇಲ್ಲ .ಒಂದರ  ಮೇಲೆ ಒಂದು  ಕೆಟ್ಟ ಕೆಟ್ಟ ಕನಸು.." ಮತ್ತೆ ಕೆಲವರು ಮುಂದೆ ಬರುವ ಸನ್ನಿವೇಷಗಳ ಸೂಚಕ .. ನಾವು ಕಂಡ ಕನಸಿನ ಹಾಗೆ ಆಗುತ್ತೆ ಎನ್ನುವವರು ಇದ್ದಾರೆ .ಕೆಲಮಕ್ಕಳು { ೭ ವಯಸ್ಸಿನ ನಂತರವೂ}  ಹಾಸಿಗೆಯಲ್ಲಿ ಉಚ್ಚೆ ಮಾಡಿ ನಾವು toilet ಹೋಗಿ ಉಚ್ಚೆ ಮಾಡಿದ ಹಾಗೆ ಆಯಿತು. ಆದ್ರೆ ಹಾಸಿಗೆಯಲ್ಲಿ ಉಚ್ಚೆ ಮಾಡಿದ್ದು ಮತ್ತೆ ಅನುಭವಕ್ಕೆ ಬಂತು ಅಂತಾರೆ.
ಕೆಲವರು ಕನಸು ಬಿದ್ದರೆ  ಅದನ್ನು  ಮೆಲುಕು ಹಾಕಲು ಪ್ರಯತ್ನಿಸುತ್ತಾರೆ . ಕೆಲವೊಂದು ಕನಸುಗಳು ನೆನಪಿಗೆ ಬರುವುದಿಲ್ಲ. ಇನ್ನೂ ಕೆಲವರು ಕನಸಿನಲ್ಲಿ ಕಂಡ ದ್ರಶ್ಯಗಳು ಒಳ್ಳೇದೆ ? ಕೆಟ್ಟದೇ ? ಎಂದು ಹಳೆ ಪಂಚಾಂಗ ಹಿಡಿದು ನೋಡುತ್ತಾರೆ .
ನಾವು ಸಣ್ಣವರಿರುವಾಗ  "ರಾಮ ರಾಮ " ಎಂದು ಹೇಳಿದ್ರೆ  ಕೆಟ್ಟ ಕನಸು ಬಿಳುವುದಿಲ್ಲ ಎಂದು ಹೇಳಿ ಸಮಾಧಾನ ಮಾಡ್ತಿದ್ರು.

ಹಾಗಾದ್ರೆ ಕನಸು  ಅಂದ್ರೆ ಏನು ?

ಕನಸಿನ  ಬಗ್ಗೆ  ವಿಷಯಗಳನ್ನು ಚೆನ್ನಾಗಿ  ಜಗತ್ತಿಗೆ ತೋರಿಸಿಕೊಟ್ಟ ಮಹಾ ಮನೋವಿಜ್ಞಾನಿಗಳು  ಫ್ರಾಯ್ಡ್  ಮತ್ತು ಯುಂಗ್ . ಫ್ರಾಯ್ಡ್ ರ ಪ್ರಕಾರ ಕನಸುಗಳು ಸುಪ್ತ ಮನಸ್ಸಿನಲ್ಲಿ ಹುದುಗಿರುವ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇರುವ ಮಾರ್ಗ ಎಂದು ಹೇಳಿದ್ದಾರೆ .ಇವರ ಪ್ರಕಾರ ನಮಗೆ ಇಷ್ಟವಾಗದ ಎಷ್ಟೋ ಭಾವನೆಗಳನ್ನು ( ಕೋಪ ... ನೋವು ..ಇತ್ತ್ಯಾದಿ) ನಮ್ಮ ಸುಪ್ತ  ಮನಸ್ಸಿನೊಳಗೆ ತಳ್ಳಿ ಬಿಡುತ್ತೇವೆ. ನಾವು ನಿದ್ರಿಸುವಾಗ ಸುಪ್ತ ಮನಸ್ಸಿನೋಳಗಿರುವ ವಿಷಯಗಳು ಮೇಲೇರಿ ಬರುತ್ತದೆ.ಆ ಅನುಭವವೇ  ಕನಸು..ಕನಸು ನಮ್ಮ ಮನಸ್ಸಿನ ಸಮತೋಲನ ಕಾಪಾಡಲು ಸಹಾಯವಾಗುತ್ತದೆ ಎಂಬುದು  ಅವರ ವಾದ. ಮನಸ್ಸಿನಲ್ಲಿರುವ ಆತಂಕ ಕನಸುಗಳಲ್ಲಿ ಕಂಡು ನಂತರವೂ  ಸುಪ್ತ ಮನಸ್ಸಿನ ಒತ್ತಡ ಕಡಿಮೆಯಾಗದಿದ್ದರೆ , ಮಿತಿಮೀರಿದ ಮಾನಸಿಕ ದಂದ್ವ ತುಮುಲಗಲಿದ್ದಲ್ಲಿ ನಮ್ಮ ಮಾನಸಿಕ ಸಮತೋಲನ ವ್ಯವಸ್ಥೆ ಕುಸಿದು ನಾವು ಕೆಲವೊಂದು ಮಾನಸಿಕ ಅಸ್ವಸ್ಥಗೆ  ಒಳಗಾಗುತ್ತೇವೆ ಎನ್ನುತ್ತಾರೆ ಫ್ರಾಯ್ಡ್ .
ಕೆಲವೊಂದು ಕನಸುಗಳು ಸಾಂಕೇತಿಕವಾಗಿ ನಮ್ಮ ಆಲೋಚನೆ, ಭಾವನೆ ಬಯಕೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಭಾವನಾತ್ಮಕ ಅನುಭವ.

ಕನಸು ನಮ್ಮ ನಿದ್ರೆಯ ಸಾಮಾನ್ಯ ಅವಿಭಾಜ್ಯ  ಅಂಗ. ಒಂದು ಘಂಟೆ ಕಾಲ ನಿದ್ದೆ ಮಾಡಿದ್ರೆ ಹತ್ತು ಹನ್ನೆರಡು ನಿಮಿಷಗಳ ಕಾಲ ಕನಸು ಬೀಳುತ್ತವೆ. ನಿದ್ರೆಯಲ್ಲಿ ಎರಡು ಹಂತವಿದೆ.
 1.Non rapid eye movement  { ಏನ್. ಅರ್. ಐ ಎಂ }
2. rapid eye movement .{  ಅರ್. ಐ.ಎಂ }

1. Non rapid eye movement  { ಏನ್. ಅರ್. ಐ ಎಂ }
ಈ ಹಂತ ವ್ಯಕ್ತಿಯ ನಿದ್ರೆಯ ಪ್ರಾರಂಬಿಕ ಹಂತ. ವ್ಯಕ್ತಿಗೆ ತನ್ನ ಸುತ್ತ ಮುತ್ತಲಿನ ಆಗು ಹೋಗುಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಅರಿವಾಗುತ್ತದೆ.ವ್ಯಕ್ತಿ ತಾನು ಪೂರ್ತಿ ಎಚ್ಚರದಿಂದ ಇದ್ದೆ ಎಂದು ಭಾವಿಸುತ್ತಾನೆ.ಆದರೆ ಅವನು ಎಚ್ಚರದಲ್ಲಿ ಇರುವುದಿಲ್ಲ.  

2. rapid eye movement .{  ಅರ್. ಐ.ಎಂ }
ಅರ್. ಐ.ಎಮ್ ಹಂತದಲ್ಲಿ ವ್ಯಕ್ತಿಯ  ಕಣ್ಣಿನ ಗುಡ್ಡೆಗಳು ವಿರಮಿಸುತ್ತವೆ. ಉಸಿರಾಟ , ಹ್ರದಯ ಬಡಿತದಲ್ಲಿ ಸ್ವಲ್ಪ ಬದಲಾವಣೆಗಳಿರುತ್ತದೆ. ಈ ಹಂತಕ್ಕೆ ಮನುಷ್ಯ ನಿದ್ರೆ ಶುರುವಾದ ಒಂದು  ಘಂಟೆಯ ನಂತರ ತಲುಪುವನು.ಯಾವುದೇ ವ್ಯಕ್ತಿಗೆ  ಈ ಹಂತದಲ್ಲಿ ಕನಸುಗಳು ಬೀಳುತ್ತದೆ. ಹಾಗೂ ಈ ಸಮಯದಲ್ಲಿ  ವ್ಯಕ್ತಿಯನ್ನು ಎಬ್ಬಿಸಿದಾಗ,  ಆತ ಕನಸು ಕಾಣುತಿದ್ದುದಾಗಿ ಹೇಳುತ್ತಾನೆ. ಹಾಗೂ ಕನಸಿನ ಬಗ್ಗೆ ಪೂರ್ತಿ ವಿವರ ಕೊಡುತ್ತಾನೆ.

 ಒಂದು ರಾತ್ರಿಯ ನಿದ್ದೆಯಲ್ಲಿ ಸಾಮಾನ್ಯವಾಗಿ  ಒಂದು ಘಂಟೆಯ ಏನ್. ಅರ್. ಐ.ಎಂ ನಿದ್ರೆ  ನಂತರ ಹತ್ತು ನಿಮಿಷಗಳ  ಅರ್. ಐ.ಎಂ ನಿದ್ರೆ , ಮತ್ತೆ ಪುನ: ಏನ್. ಅರ್. ಐ ಎಂ ನಿದ್ರೆಯಾಗುತ್ತದೆ . ಹೀಗೆ  ಒಂದು ರಾತ್ರಿಯ ನಿದ್ರೆಯಲ್ಲಿ ಕನಿಷ್ಠ ನಾಲ್ಕು - ಐದು ಬಾರಿ ಈ ಚಕ್ರ ಪುನರಾವರ್ತನೆ ಆಗುತ್ತದೆ. ಪ್ರತಿ ರಾತ್ರಿ  ವ್ಯಕ್ತಿಯು ಸುಮಾರು ಐವತ್ತು ನಿಮಿಷಗಳ ಕಾಲ ಕನಸು ಕಾಣುತ್ತಾನೆ. ಎಲ್ಲ ಕನಸುಗಳು ನೆನೆಪಿರುದಿಲ್ಲ ಯಾಕೆಂದರೆ ಕನಸು ಕಾಣುವ   ಅರ್. ಐ.ಎಂ ನಿದ್ರೆಯ ನಂತರ  ಏನ್. ಅರ್. ಐ ಎಂ ನಿದ್ರೆ  ಶುರುವಾಗಿ ಮೊದಲು ಬಿದ್ದ ಕನಸುಗಳು ಮರೆಯಾಗುತ್ತದೆ. ನಿದ್ರಾ ತೊಂದರೆ ಇರುವ ವ್ಯಕ್ತಿ ತನಗೆ ಕನಸಿನಿಂದ ನಿದ್ರೆ ಹಾಳಾಯಿತು ಎನ್ನುತ್ತಾನೆ. ಆದರೆ ವಾಸ್ತವ ಅವನು ನಿದ್ರೆಯಿಂದ ಆಗಾಗ ಎಚ್ಚರವಾಗುವುದರಿಂದ ಕನಸುಗಳು ನೆನೆಪಿರುತ್ತವೆ ! ಕನಸು ಹೆಚ್ಚು ಬಿಳಲೂ  ಇಲ್ಲ !

ಕನಸುಗಳನ್ನು ನಾವು  ವಿಭಾಗಗಳಾಗಿ ವಿಂಗಡಿಸಬಹುದು .

1 ಅರ್ಥವಾಗುವ ಕನಸು.
2.ಅರ್ಥವಾಗುವ  ಅಂದರೆ ಗೊಂದಲ ಉಂಟು  ಮಾಡುವ ಕನಸು.
3. ಅರ್ಥವಾಗದ ವಿಚಿತ್ರ  ಕನಸು.

 1 .ಅರ್ಥವಾಗುವ ಕನಸುಗಳು

ಇಲ್ಲಿ ನಮಗೆ ವಸ್ತುಗಳು ನೇರವಾಗಿ ಪ್ರಕಟಗೊಳ್ಳುತ್ತವೆ. ಬಡವನಿಗೆ ತಾನು ಶ್ರೀಮಂತನಾಗುವ ಕನಸು. ಮಕ್ಕಳಿಲ್ಲದವರಿಗೆ  ಮಕ್ಕಳಾಗುವ ಕನಸು. ಇಂತ ಕನಸು ವ್ಯಕ್ತಿಯ ಮನಸ್ಸಿನ ಬಯಕೆ , ಆಲೋಚನೆಗಳನ್ನು ನೆರವಾಗಿ ತೋರಿಸಿಕೊಡುತ್ತದೆ.ಹೀಗೆ ನೇರ ಕನಸನ್ನ ನಾವು ಕಂಡು ಮನಸ್ಸನ್ನು ಹಗುರಗೊಳಿಸಬಹುದು.


2.ಅರ್ಥವಾಗುವ  ಅಂದರೆ ಗೊಂದಲ ಉಂಟು  ಮಾಡುವ ಕನಸು.

ಇಲ್ಲಿ ಸಹ ಕನಸುಗಳು ಅರ್ಥವಾಗುತ್ತದೆ. ಕನಸುಗಳು ನೇರವಾಗಿರುತ್ತದೆ. ಆದ್ರೆ ಅ ಕನಸು ಯಾಕೆ ಬಿತ್ತು ಎಂಬುದು ಅರ್ಥವಾಗದೆ ನಾವು ತಲೆಕೆಡಿಸಿ ಕೊಳ್ಳುತ್ತೇವೆ. ಕನಸ್ಸಿನಲ್ಲಿ  ಕಾಣುವ ಸನ್ನಿವೇಶಗಳಲ್ಲಿ ನಮಗೆ ಆಸೆಯೋ  ಬಯಕೆಗಳೇನೋ   ಇರುದಿಲ್ಲ.  ಅಷ್ಟೊಂದು ಪರಿಚವಿಲ್ಲದ ವ್ಯಕ್ತಿಯೊಬ್ಬರು ನಮ್ಮ ಮನೆಗೆ ಬಂದಂತೆ ಅವರೊಡನೆ ಕುಳಿತು ಸಮಯ ಕಳೆದಂತೆ .. ಇತ್ಯಾದಿ..ಒಂದಕ್ಕೊಂದು ಸಂಬಂದವಿರುದಿಲ್ಲ .ಹೀಗೆ  ಎದ್ದು ಕುಳಿತುಕೊಂಡು ನಾವು ಅದರ ಬಗ್ಗೆ ಎಷ್ಟೋ ಸಲ ಯೋಚನೆ ಮಾಡಿ ತಲೆಕೆಡಿಸಿಕೊಳ್ಳುತ್ತೇವೆ.


3. ಅರ್ಥವಾಗದ ವಿಚಿತ್ರ  ಕನಸುಗಳು .

ಇಲ್ಲಿ ಕನಸಿನ ಪ್ರತಿ ದ್ರಶ್ಯವು ಸಾಂಕೇತಿಕ ನಿಗೂಢ ಅರ್ಥವನ್ನು ಒಳಗೊಂಡಿರುತ್ತದೆ.  ಉದಾ :  ಹುಡುಗಿಯೊಬ್ಬಳು   ದಿನವೂ ವಿಚಿತ್ರ ಮತ್ತು ಭಯಾನಕ ಕನಸುಗಳನ್ನು ಕಾಣುತ್ತಿದ್ದಳು. ತನ್ನನ್ನು ನಿರ್ಜನ ಪ್ರದೇಶದಲ್ಲಿ ಯಾರೋ ಅಟ್ಟಿಸಿಕೊಂಡು ಹೋದಂತೆ ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡಿದರೂ ತಪ್ಪಿಸಿಕೊಳ್ಳಲಾಗದೆ ಅವರು ತನ್ನನ್ನು ಕೊಲ್ಲಲು ಯತ್ನಿಸುತ್ತಾರೆ ಎನಿಸುವಾಗ ಕಿರಿಚಿ ಎಚ್ಚರಗೊಳ್ಳುತ್ತಿದ್ದಳು.
ಆಕೆಯೊಂದಿಗೆ  ಮಾತಾನಾಡಿಸಿ,  ಮನೋವಿಶ್ಲೇಷಣೆ ಮಾಡಿದಾಗ ಅವಳಲ್ಲಿರುವ ಗೊಂದಲಗಳು ಸ್ಪಷ್ಟ ವಾಗಿ ಅರ್ಥವಾಯಿತು. ಅವಳ ಪೋಷಕರು ಅವಳನ್ನು ಮದುವೆಯಾಗದಿರಲು ಒತ್ತಾಯಿಸುತಿದ್ದರು. ಆದರೆ ಅಕೆಗೆ ಮಾಡುವೆಯಗಲು ಇಷ್ಟವಿದ್ದು ಹೆತ್ತವರ ವಿರೋಧ ಎದುರಿಸಲು ಶಕ್ತಳಾಗಿರಲಿಲ್ಲ. ಹಾಗಾಗಿ ಮನಸ್ಸಿನ ದಂದ್ವಗಳು  ಸಾಂಕೇತಿಕವಾಗಿ ಕನಸಿನ ರೂಪದಲ್ಲಿ ಕಾಣಿಸಿತು.
 ಕನಸ್ಸು  ಭವಿಷ್ಯ ಸೂಚಕವಲ್ಲ  ಎನ್ನುತ್ತಾನೆ ಫ್ರಾಯ್ಡ್ . ವ್ಯಕ್ತಿಯ ಮನದಾಳದಲ್ಲಿ ಏನು ಆಸೆ ಇರುತ್ತದೆಯೋ ಅದು ಕನಸಿನಲ್ಲಿ ಕಾಣಿಸಿಕೊಳ್ಳುತ್ತದೆ . ಮತ್ತೆ ಹಾಗೆಯೆ ಅದು ನಡೆದು ಬಿಟ್ಟರೆ ಕನಸ್ಸು ಭವಿಷ್ಯ ಸೂಚಕ ಎಂದುಕೊಳ್ಳುತ್ತೇವೆ ಅಷ್ಟೇ ! ಆದ್ರೆ ಈ ವಿಷಯದ ಮೇಲೆ ಇನ್ನೂ ಅಧ್ಯಯನ ನಡೆಯುತ್ತಿದೆ.

{ಕೆಲಸದ ಒತ್ತಡದಿಂದ ಹಲವಾರು ದಿನಗಳಿಂದ ಈ ಲೇಖನವನ್ನು ಪೂರ್ತಿಗೊಳಿಸಲಾಗದೆ  ನಾನು ಕೂಡ ಈ ಲೇಖನವನ್ನು ಪೂರ್ತಿಗೊಳಿಸಿದ ಕನಸು ಕಂಡಿದ್ದೇನೆ.. ಕಡೆಗೂ ಸಂಪೂರ್ಣಗೊಳಿಸಿ  ನಿಮ್ಮ ಮುಂದೆ ಇಟ್ಟಿದ್ದೇನೆ..( ಕನಸು ನನಸಾಯಿತು!!)  ಇನ್ನೂ ಅನೇಕ ವಿಷಯಗಳಿದ್ದು ಓದುತ್ತಿರುವಾಗಲೆ ನೀವೆಲ್ಲ  ನಿದ್ರೆಗೆ ಜಾರಿ ಕನಸು ಕಾಣದಿರಿ ಎಂದು ಚಿಕ್ಕದಾಗಿ ಬರೆದಿದ್ದೇನೆ..}




Saturday, June 11, 2011

ಸೂತ್ರಧಾರಿ



"ಅಮ್ಮ"
 ನಿನ್ನ ತೋಳಿನ ಬಂದನ..
ಆಯಿತು ನನ್ನ ಮನ ನಂದನ 
ಮರೆಯಾಲಾರೆ ಆ ಅಲಿಂಗನ..
ಆಹಾ! ಅದುವೇ ಮಧುರ ರೋಮಂಚನ...


ಹೆಜ್ಜೆಯನಿಟ್ಟೆ ನಿನ್ನ ಹೆಜ್ಜೆಯ ಮೇಲೆ 
ತೋರಿಸಿದೆ ನಕ್ಷತ್ರ ಆಕಾಶದ ಮೇಲೆ 
ಸತಾಯಿಸಿದ್ದೆ  ಅಂದು ತೋರಿಸಿ  ನನ್ನ ಬಾಲ್ಯಲೀಲೆ 
ಆದರೂ ನೀ ಸುರಿಸಿದೆ  ಪ್ರೀತಿಯ ಸುರಿಮಳೆ .....

ನಿನ್ನ ಕೈ ತುತ್ತು ನೀಡಿದೆ 
ನನ್ನ ಕೈ ತಿದ್ದಿ ತೀಡಿದೆ
ನಾ ನಿನ್ನ ಶಿಕ್ಷಾರ್ಥಿಯಾದೆ 
ನಿನ್ನ ಗದರಿಕೆಗೆ ಗುರಿಯಾದೆ


ಗೊತ್ತಗಲಿಲ್ಲ ನಿನ್ನ ಗದರಿಕೆಯ ಗುಟ್ಟು 
ಈಗಾಗಿದೆ ಆ ನಿನ್ನ ಗುಟ್ಟು ರಟ್ಟು 
ಕೇಳುವರು ಎಲ್ಲಾ ನನ್ನ ಯಶಸ್ಸಿನ ಗುಟ್ಟು
ಮಾಡುವುದು ನನ್ನ ಕೈ ನಿನಗೆ ಬೊಟ್ಟು 


"ಅಮ್ಮ"
   ಇದು ನಿನ್ನ ಕಂದನ ಕರುಳಿನ
   ಕರೆಯೋಲೆ
  ನಿನ್ನ ನೆನಪು ನಿರಂತರ! ಚಿರಂತರ !
    ಮಧುರ ! ಸುಮಧುರ !




{ಬ್ಲಾಗ್ ಮಿತ್ರ ಪ್ರದೀಪ್ ಸಲಹೆಯಂತೆ ಎರಡು ಸಾಲುಗಳನ್ನು ಬದಲಾಯಿಸಿದ್ದೇನೆ  }
ಧನ್ಯವಾದಗಳು ಪ್ರದೀಪ್
ಚಿತ್ರ ಕೃಪೆ: ಅಂತರ್ಜಾಲ

Saturday, April 30, 2011

ನಿನಗಾಗಿ

ಅದ್ಯಾಕೊ
ನೀ ಜೊತೆಗಿದ್ದ ದಿನ 
ಬೀಗುತ್ತಿತ್ತು  ನನ್ನ ಮನ 
ನಾನೆಂದೆ ನೀನೆ ನನ್ನ ಪ್ರತಿ ಕ್ಷಣ 
ಅರಿಯದಾದೆ ನಿನ್ನೊಳಗಿನ ಮನ..... 


ಆದರೆ ,
ನೀ ದೂರವಾದೆ ಈ ದಿನ.
ಹ್ರದಯ ಮಂಕಾಯಿತು.... 
ಮಾತು ಮೌನವಾಯಿತು ....
ನನ್ನುಸಿರೇ ಬಾರವಾಯಿತು....


ಮತ್ತೆ .
ತೆರೆದೆ ಮನದ ಪ್ರತಿ  ಪುಟವ...
ಓದಿದೆ ನಿನ್ನೊಡನಿದ್ದ  ಪ್ರತಿ ನಿಮಿಷವ
ಗೋಚರಿಸಿದ್ದು  ವಾಸ್ತವ ...
ಮರೆಯಲಾರೆನು  ನೀ  ಕಲಿಸಿದ ಪಾಠವ ...


ಇಗ್ಯಾಕೊ,  
ಅನಿಸುತ್ತಿದೆ  ನೀನಾದೆ ಕಾಣದ ಕಡಲು
ಸಿಗಲಿ ನಿನಗೆ ಪ್ರೀತಿಯ ಹೊನಲು
ಹಾರೈಸುವೆ  ಶುಭ್ರ ಮನದಿ
ನಿನಗೆ ಒಳಿತಾಗಲು .....ನಿನಗೆ ಒಳಿತಾಗಲು .....

ಚಿತ್ರ ಕೃಪೆ: ಅಂತರ್ಜಾಲ




Sunday, March 13, 2011

Autism


Autism is a word coined simultaneously by leo kanner and hans asperger , who were both trained in Vienna.
Definition
American persons with disabilities Act “Autism as developmental disabilities significantly affecting verbal and nonverbal communication and social interaction, generally before the age of 3, which adversely affect a Child’s educational performance. Other characteristics often associated with Autism are engaged in repetitive activities and stereotypic movement, resistance to environmental change, or changes to daily routines and unusual responses to the sensory experience. The term does not apply if a child’s educational performance is adversely affected primarily because the child has a serious emotional disturbance.”
Characteristics of Autism.
1.       Difficulty in relating to others.
2.       Resistance to change.( it may be a place , or person )
3.       Stereotyped behavior.
4.       Echolalia and literalness of language.
5.       Sleeping, eating, elimination problem.
6.       Attachment to objects rather than humans. ( lack of face to face to contact )
7.       Poor pretend play and imagination.
8.       Inability to express emotion. ( for eg if u scold also they will laugh since they can’t  understand your feelings)
9.       Deficits in pragmatics (   social usage) of language and communication.
10.    Poor organization and planning.
.The strength of autism  
1.     Good rote memory.
2.     Good visual spatial memory.
3.     Good mechanical memory.
4.     Language mostly self thought.
5.     Hyperlexia and neologism.
6.     Methodical and systematic.
7.     Advanced splinter skills.
8.      Good Music skill.
9.     Good in computers.
10.  Good in puzzles.

Associated disorders with Autism.
 1. Congenatel rubella
 2. Encephalitis
3. Cerebral palsy.
4. Meningitis.
5 infantile spasm.
6. Epilepsy
7. Down’s syndrome.
8. Muscular dystrophy.etc

.
   





















Tuesday, March 8, 2011

" ನೀನ್ಯಾರು"?




ಅಕ್ಕನಾದೆ ತಂಗಿಯಾದೆ....
ಮಾರ್ಗದರ್ಶಿಯಾದೆ ಪ್ರೀತಿ ಪಾತ್ರಳಾದೆ..
ಧರ್ಮಪತ್ನಿಯಾದೆ
ಜೀವನದ ದೋಣಿ  ಮಂದುವರಿಸಿದೆ.....
ಪುಟ್ಟನ ಅಮ್ಮನಾದೆ
ಮಮತಾಮಯಿಯಾದೆ..

ನಡೆದ ಹೆಜ್ಜೆಗಳು ಹಲವಾರು..
ಕಲಿತ ಪಾಗಳು ನೂರರು..
ಮಿಡಿತ ತುಡಿತಗಳು ಸಾವಿರಾರು
ಓ ಹೆಣ್ಣೇ " ನೀನ್ಯಾರು"?


ಜಗತ್ತಿನ ಪ್ರತಿಯೊಂದು  ಮಹಿಳೆಗೂ  ಮಹಿಳಾದಿನದ  ಹಾರ್ದಿಕ ಶುಬಾಶಯಗಳು .......


Thursday, February 24, 2011

ಆಶಾವಾದ


ಆಂದು,
 ಮೋಡ ಕವಿದಿತ್ತು
ನಕ್ಷತ್ರಗಳು ಕಾಣದಾಗಿತ್ತು 
ನನ್ನ ಕಂಬನಿಗಳೇ ಮಳೆನೀರಾಗಿತ್ತು.
ಭಾವನೆಗಳೆಲ್ಲವು ಕೊಚ್ಚಿ ಹೋಗಿತ್ತು. 

ಇಂದು....
ನೀ ಬಂದ ಕ್ಷಣ..
ಪ್ರಕಾಶಮಾನವಾಗಿದೆ ಈ ದಿನ.. 
ಕಾಣುತ್ತಿವೆ ಕನಸುಗಳನ್ನು ನನ್ನ ಮನ 
ಮರಿಚಿಕೆಯಾಗದಿರಲಿ ಮುಂದಿನ ದಿನ .....
ಕಾಯುತ್ತಿರುವೆನು ನಿನಗಾಗಿ ಕ್ಷಣ ಕ್ಷಣ ....

Tuesday, February 1, 2011


                                                    ಯಾಂತ್ರಿಕತೆ  ................................
                                      
ಭಾವನೆಗಳಿಗೆ ಇತ್ತೀಚಿಗೆ ಬೆಲೆಯೇ ಇಲ್ಲ.....ಈಗಿನ ಮಕ್ಕಳು ತುಂಬಾ ಜೋರು.... ಎಂದೆಲ್ಲ ಮಾತುಗಳು ನಾವು ಕೇಳುತ್ತಿರುವುದು ಸಹಜ....ಹಾಗೆದರೆ ಭಾವನೆಗಳು ಯಾಕಿಲ್ಲ....?
ಯಾವ ಮಕ್ಕಳು ಸಹ ಹುಟ್ಟುತ್ತಲೇ ಎಲ್ಲವನ್ನು ಕಲಿತು ಬರುವುದಿಲ್ಲ......ಅವರು ಬೆಳೆಯುತ್ತಾ ಕಲಿಯುತ್ತಾರೆ. ಹಾಗದರೆ ಬೆಳೆಸುವ ರೀತಿಯಲ್ಲಿ ನಮ್ಮಿಂದ ಕಲಿಯುತ್ತಾರೆಲ್ಲವೆ? ನಾವೇಷ್ಟು ಮಕ್ಕಳಿಗೆ ಭಾವನೆಗಳ ಬಗ್ಗೆ ಕಲಿಸಿಕೊಡುತ್ತೇವೆ?
ಮಗುವಿಗೆ ಹಿಂದಿನ ಕಾಲದಲ್ಲಿ ಅಮ್ಮ  ತೊಟ್ಟಿಲಲ್ಲಿ ಹಾಕಿ ತೂಗುತ್ತಾ  ಮಗುವನ್ನು ಜೋಗುಳ ಹಾಡಿ ಮಲಗಿಸುತ್ತಿದ್ದಳು. ಅವಳ ಹಾಡನ್ನು ಕೇಳುತ್ತಾ... ನಿದಿರೆಗೆ ಜಾರುವುದು ಮಗುವಿನ ಅಭ್ಯಾಸವಾಗಿತ್ತು. ಆದರೆ ಈಗ ಮಗುವನ್ನು ವಿದ್ಯುತ್  ತೊಟ್ಟಿಲಲ್ಲಿ ಮಲಗಿಸಿ  ( ಸ್ವಿಚ್ ಹಾಕಿದ ತಕ್ಷಣ ತೊಟ್ಟಿಲು ತೂಗುತ್ತದೆ) ಸಿ.ಡಿ. ಹಾಕಿದರೆ   ತಕ್ಷಣ ಇಂಪಾದ ಹಾಡುಗಳು .......
ಅಮ್ಮ , ಅಪ್ಪ ಮಕ್ಕಳನ್ನು  ಎತ್ತಿಕೊಂಡು, ತಬ್ಬಿಕೊಂಡು ಮಗುವಿನೊಂದಿಗೆ ಮಾತಾಡುತ್ತಾ.... ಅದರ ತೊದಲು ನುಡಿಯ ಪ್ರಶ್ನೆಗೆ ಅಥ೯ ಕಲ್ಪಿಸುತ್ತಾ  ಅದಕ್ಕೆ ಉತ್ತರ ಕೊಡುತ್ತಾ ದಾರಿಯಲ್ಲಿ ನಡೆಯುವುದು ಅದೆಷ್ಟು ಚೆನ್ನ... ಆದರೆ ಈಗ ಮಗುವನ್ನು  ಗಾಡಿಯಲ್ಲಿ ನೂಕುತ್ತಾ....ಮಗು ಅದರ ಪಾಡಿಗೆ ನಾವು ನಮ್ಮ ಪಾಡಿಗೆ ..ಅದರ ಕುತೂಹಲದ ಮಾತಿಲ್ಲ ಕತೆಯಿಲ್ಲ...
ಮಗು ನಡೆಯುವಾಗ  ಬೀಳುವಾಗ ಕೆಲಸಾದಕೆಯೆ ಅಮ್ಮ , ಅಪ್ಪ , ...........ಹಾಗದರೆ ಅವರ ಅಪ್ಪ ಅಮ್ಮನ ಅಜ್ಜ ಅಜ್ಜಿಯ  ಪ್ರೀತಿ ಎಲ್ಲಿದೆ?
ಎಲ್ಲವೂ ಯಾಂತ್ರಿಕವಾಗಿರುವಾಗ ಮಗು ಭಾವನೆಯನ್ನು  ಕಲಿಬೇಕೆನ್ನುವುದರಲ್ಲಿ ಅರ್ಥವಿದೆಯ ?



Wednesday, January 26, 2011

Special Children and Individualized Educational Program












       we all know about mental retardation. However many people talk about mental retardation still with some confusion of their education. The child with mental retardation will face the problem in various filed. Mentally retarded have “bellow average” in intelligence.   They will lag behind in “adaptive behavior”, which means individual fails to meet the standards of personal independence and “social responsibility” expected of one’s “age” and “cultural group”.
     Each child is unique. Two persons with mental retardation are not alike. Many of them have number of associated problems..It’s important that the problems be recognized as early as possible for only can the child be made to learn these adaptive behavior. So each child is assessed individually, in his adaptive competence. For overcome his particular problem should be planned and administered.
   Associated conditions,
In addition to deficits in intelligence and adaptive behavior, many persons with mental retardation have some associated condition also. The most common associated condition seen in the person with mental retardation are epilepsy, hyperactivity, and visual, hearing and speech defeats.
Some of the retarded persons have psychiatric problems like autism and psychosis; and some other have neurotic problems like neurotic disturbances, nutritional disorder and poor health.


 Individualized Educational program
Individualized program it self says that it meant for only that particular individual. how we stitch dress for ourself with a tailor , like that this  educational plan  tailored for a particular person.over the years of service providers all over the world suggested that individualized education plan is the good management plan for the person with special needs
It contains assessment goal setting writing behavioral objective and evaluation including problem behavior other associated conditions management plan. For this assessment we need various forms n tools connected with the program.
So success in teaching or training with person with  special needs  depend upon the plan management  of trainer. There for Individual Education  program of persons with mental retardation  handled by  Interdisciplinary team  {resource persons like Special educator, psychologists,  speech therapist physiotherapist  and Medical  doctor} 


Let all of us  think about Sarva Shiksha  Abhiyana ........ Inclusive Education ....  but let us also think that whether Sarva Shiksha  Abhiyana meets these needs of mentally challenged person.........  
 

Monday, January 24, 2011




           ಆಡು ಮಾತು, ಸಂಸ್ಕ್ರತಿ  ಮತ್ತು ಮನೋಶಾಸ್ತ್ರ


ನಾನು ಮನೋವಿಜ್ಞಾನದ ವಿದ್ಯಾರ್ಥಿಯಾಗಿದ್ದಾಗ  ಅಮ್ಮ ಪ್ರತಿ ಸಲ ಏನಾದ್ರು ಆಡು ಮಾತು,  ಅಂದ್ರೆ ಸಾಕು ಅದು  "ಅದೆಲ್ಲಾ ಸುಮ್ಮನೆ"  ಎಂದು ಹೇಳಿ ಅವರನ್ನು ಟೀಕಿಸಿ ನಕ್ಕಿದ್ದು ಇದೆ. ಹಾಗೆ ಅದೆಷ್ಟೋ ಬಾರಿ ತಲೆ ಕೆಡಿಸಿ ಕೊಂಡದ್ದೂ ಇದೆ.
ಅವರು ಹೇಳುತ್ತಿದ್ದ ಕೆಲವೋಂದು ಮಾತುಗಳು ಮನೋಶಾಸ್ತ್ರಕ್ಕೆ ಏಷ್ಟೋಂದು ಹೋಲಿಕೆ ಇದೆ ಎಂದು ಈಗ ನನಿಗೆ ಅನಿಸುತ್ತಿದೆ.
ಕುಟುಂಬ ಮನುಷ್ಯನ ಜೀವನದಲ್ಲಿ ಅತೀ ಮುಖ್ಯ ಅಂಶ. ಅದು ಪ್ರತಿಯೊಂದು ಮನುಷ್ಯನ ಪ್ರತಿಬಿಂಬ. ಕುಟುಂಬದಲ್ಲಿ ಆರೋಗ್ಯಕರ ವಾತವರಣವಿದ್ದಲ್ಲಿ ಮನುಷ್ಯನ ಆಲೋಚನೆಯು ಸಕಾರತ್ಮಕವಾಗಿರುತ್ತದೆ. ಕುಟುಂಬದಲ್ಲಿ ಬರಿ ಅನುವಂಶಿಯತೆ (heridity or nature )  ಮಾತ್ರವಲ್ಲದೆ   ಬೆಳೆಯುವ ರೀತಿ (narture) ಸಹ ಬಹಳ ಮುಖ್ಯ.
ನಮ್ಮ ಸಂಸ್ಕ್ರತಿ ಯಲ್ಲಿ ಕುಟುಂಬದ ವಿವಿದ ಪಾತ್ರಗಳ ಗುಣಗಳು ಜವಾಭ್ದಾರಿಗಳು  ಇವೆ . ಆದರಂತೆ ನಡೆದರೆ ಗೊಂದಲಗಳು ಕಡಿಮೆ. ಸಮತೋಲನ ಹೆಚ್ಚು.
ನಮ್ಮ ಸಂಸ್ಕತಿಯು ನಮಗೆ ಹಲವು ಸನ್ನಿವೇಶಗಳ ಹಾಗೂ ಪಾತ್ರಗಳ ಚಿತ್ರಣಗಳನ್ನು ಕೊಟ್ಟು ನಾವು ಹೇಗೆ ಇದ್ದರೆ ನಮ್ಮ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಿದೆ.,
"ತಾಯಿಯಂತೆ ಮಗಳು, ನೂಲಿನಂತೆ ಸೀರೆ" ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲ. . ಇತ್ಯಾದಿ ... ಇಂತಹ ನಮ್ಮ ಹಿರಿಯಯರು ಅನುಭವದಿಂದ ಆಡಿದ ಮಾತುಗಳನ್ನು ಸಮಾಜ ಮನೋಶಾಸ್ತ್ರಜ್ನರು ಆನೇಕ ಅದ್ಯಯನದಿಂದ ಸಮಥಿ೯ಸಿದ್ದಾರೆ.
ನಾವೆಲ್ಲ ಆಡು ಮಾತು, ಸಂಸ್ಕ್ರತಿ  ಮತ್ತು ಮನೋಶಾಸ್ತ್ರ ಇವೆಲ್ಲವನ್ನು ಮುಂದಿಟ್ಟುಕೊಂಡು ಸಕಾರತ್ಮಕವಾಗಿ ನಮ್ಮ ಕುಟುಂಬವನ್ನು , ಮತ್ತು ಸಮಾಜವನ್ನು ಬೆಳೆಸೋಣ


Thursday, January 13, 2011

ಅನುಕಂಪಕ್ಕಿಂತ ಅವಕಾಶ ಸಿಕ್ಕರೆ .........

ಅನುಕಂಪಕ್ಕಿಂತ  ಅವಕಾಶ  ಸಿಕ್ಕರೆ .........

ಡಿಸೆಂಬರ್ ೪ ರಂದು ಎಲ್ಲಾ ನ್ಯೂಸ್ ಚಾನೆಲ್  ನ್ಯೂಸ್  ಪೇಪರ್ ಗಳಲ್ಲಿ  ಅಲ್ಲಿ ಇಲ್ಲಿ ಅಂಗವಿಕಲರ  ದಿನಾಚರಣೆ  ಆಚರಿಸಿದ ಸುದ್ದಿ !!!!.
ನಾನು ಹೇಳು ತ್ತಿರುವುದು   ಬುದ್ದಿ ಮಾಂದ್ಯರ ಬಗ್ಗೆ ........,
ನಂಗೆ ಅದೇಷ್ಟೋ ಜನ "ಹೋ .." ಹುಬ್ಬೇರಿಸಿ ದವರು ಇದ್ದಾರೆ ,ಇನ್ನು ಕೆಲವರು "ಅವರನ್ನು ನೀನು ಹೇಗೆ ಮೆಂಟ್ಯೆನ್ ಮಾಡುತೀಯಾ?"
ಇದೆಲ್ಲಾ ಪ್ರ ಶ್ನೆಗೆ ನನ್ನ ಉತ್ತರ ಕೇವಲ ನಗು ಹಾಗೂ ನನ್ನ ಕೆಲಸದ ಮೇಲೆ ನನಗಿರುವ ಅಭಿಮಾನ.!!
ಪ್ರತಿಯೊಬ್ಬ ಮನುಷ್ಯನಿಗೂ  ಅವನದೆ ಆದ ಪ್ರತಿಭೆ ಗಳಿರುತ್ತದೆ ಎನ್ನುವುದು  ನಮಗೆಲ್ಲರಿಗೂ  ಗೊತ್ತಿರುವ ವಿಷಯ. ಅಂತೆಯೆ ಬುದ್ದಿ ಮಾಂದ್ಯರೂ ಅವರದೆ ಆದ ಪ್ರತಿಬೆ ಹೊಂದಿರುತ್ತಾರೆ ,ಹಾಗೂ ಅದು ನಿಜಕ್ಕೂ ಶ್ಲಾಘನೀ ಯ...ಆದ್ದರಿಂದಲೇ ಅವರನ್ನು ವಿಶೇಷ ಸಾಮಥ್ಯದ ಮಕ್ಕಳು .. ಎನ್ನು ತ್ತಿರುವುದು.
ಇತೀಚಿನ  ದಿನಗಳಲ್ಲಿ ಸಾಮಾನ್ಯ  ಮಕ್ಕಳಿಗೆ  ಸಿಗುತ್ತಿರುವ ಸವಲತ್ತು ಅಥವಾ ಅವಕಾಶ ನಮ್ಮ ವಿಶೇಷ ಮಕ್ಕಳಿಗೆ ಸಿಗಲಿ ...ಅಂಗವಿಕಲತೆ ಶಾಪವಾಗದಿರಲಿ  
ಅವರಿಗೆ ಇನ್ನಷ್ಟು ಅವಕಾಶ ಗ ಳು ಸಿಕ್ಕಿ ಅವರು  ನಮ್ಮ  ಸಮಾಜಕ್ಕೆ  ಆಸ್ತಿಯಾಗಲಿ.......