Pages

Tuesday, July 19, 2011

"ಸ್ವಾಮಿ ನಾವಿರೋದೇ ಹೀಗೆ"!!!!!

ನನಗೆ ಇತ್ತೀಚಿನ ದಿನಗಳಲ್ಲಿ ಯಾಕೊ ದಪ್ಪದವರನ್ನು ನೋಡಿದ್ರೆ " ಅಯ್ಯೋ ಪಾಪ" ಅನಿಸುತ್ತಿದೆ. ಯಾಕೆಂದ್ರೆ ನಾನು ಅವರ ಸಾಲಿನ ಮೊದಲ ಅಭ್ಯರ್ಥಿ! ಅವರ ಕಷ್ಟ ನಂಗೆ ಗೊತ್ತು ಸ್ವಾಮಿ!! ಒಂದು ಮದುವೆ ಮುಂಜಿಗೆ ಹೋಗಲಿಕ್ಕೆ ಇಲ್ಲ , ಅಲ್ಲಿ ಬಂದು ಬಳಗದವರು ಸಿಕ್ಕಿ ಕುಶೋಲೋಪರಿ ವಿಚಾರಿಸಿ"ನಿನ್ನ ಪರಿಚಯ ಆಗಲಿಲ್ಲ ಅಂತ ಅಂದಾಗ ನಮ್ಮ ಬಯೋಡಟಾ ಎಲ್ಲ ಹೇಳುವಷ್ಟರಲ್ಲಿ ಪಕ್ಕದಲ್ಲಿ ಕುಳಿತವರ  ಕಮೆಂಟ್ "ನೀನು ಈಗ ದಪ್ಪ ಆಗಿ ನಿನ್ನ ಪರಿಚಯವೇ  ಸಿಕ್ಲಿಲ್ಲ ". ಇನ್ನು ಕೆಲವರು " ನೀನು ದಪ್ಪ ಆಗಿದ್ದಿಯಲ್ಲ. ಮುಂಚೆ ನೀನು ತುಂಬಾ ಸಪೂರ ಇದ್ದಿಯಲ್ವಾ .....  ನೀನು ಸ್ವಲ್ಪ ಸಣ್ಣಗಿದ್ದರೆ ಚೆನ್ನಾಗಿರೋದು" ...ಎಂಬ ಉಚಿತ ಸಲಹೆ ಬೇರೆ.

ನನ್ನ ಗೆಳಯನೊಬ್ಬ ನಂಗೆ  " ಡುಮ್ಮಿ" ಎಂದು ನಾಮಕರಣ ಬೇರೆ ಮಾಡಿಬಿಟ್ಟಿದ್ದಾನೆ. ನನ್ನ ಪುಟ್ಟದಾದ ಹೆಸರಿಗೆ ಎಷ್ಟು ಬೇಸರ ಆಗಿರದು ಹೇಳಿ... ?
ನನ್ನ ಕೆಲ ಗೆಳೆಯರೋ " ನೀ ಯಾವ ಅಕ್ಕಿ ತಿನ್ನುತ್ತಿ ಮಾರಾಯ್ತಿ? ನಂಗೆ ಸಹ ಕಳುಹಿಸಿಕೊಡು..." ಅಂತಾರೆ ಕೀಟಲೆಗಾಗಿ.
ಇನ್ನು  ನನ್ನ ಅಂಟಿಯವರೋ " ಇಷ್ಟು ಸಣ್ಣ ಪ್ರಾಯಕ್ಕೆ ಹೀಗೆ ದಪ್ಪ ಆದ್ರೆ ಮತ್ತೆ  ಮತ್ತೆ ಬಿ.ಪಿ , ಶುಗರ್ ಬರುತ್ತೆ .. ಜಾಗ್ರತೆ ಮಾಡು. ಸ್ವಲ್ಪ ನಿನ್ನ ತೂಕ ಇಳಿಸು ಎಂದಾಗ ಹೂಂ ಎಂದು ನನ್ನ ತಲೆ ಅಲ್ಲಾಡಿಸುತ್ತೇನೆ.

ಇವರೆಲ್ಲರ  ಮಾತಿಗೆ ಪುಷ್ಟಿಯೊ ಎಂಬಂತೆ ಮೊನ್ನೆ ತುಂಬಿ ತುಳುಕುತ್ತಿದ್ದ  ಮಂಗಳೂರಿನ ಸೀಟಿ ಬಸ್ಸಿನಲ್ಲಿ ನಾನು ಹತ್ತಿದೆ, ಮುಂದಿನಿಂದ ಕಂಡೆಕ್ಟರ್ ಮಹಾಶಯ ಹಿಂದೆ ಹೋಗಿ ಅಂದ್ರೆ ಹಿಂದಿನಿಂದ ಕ್ಲಿನರ್ ಮಹಾಶಯ ಮುಂದೆ ಹೋಗಿ ಎಂದು  ಕಿರುಚಾಡುತ್ತಿದ್ದ. ನಾನೋ ಬಸ್ಸಿನಲ್ಲಿ ನನ್ನ ಪು(ದ)ಟ್ಟ ದೇಹವನ್ನು ಹೇಗಪ್ಪಾ ಸಂಭಾಳಿಸಲಿ. ಅದರೆಡೆಯಲ್ಲಿ ಸ್ಕೂಲ್ ಮಕ್ಕಳ ಬ್ಯಾಗ್ 9 ತಿಂಗಳ ಗರ್ಭಿಣಿಯಂತೆ ತುಂಬಿ ತುಳುಕುತಿತ್ತು. ಬಸ್ಸಿನಿಂದ ಇಳಿಯುವವರ ಕಣ್ಣುಗಳು ನನ್ನನ್ನು ಕೆಕ್ಕೆರಿಸಿ ನೋಡಿದಾಗ ನಂಗೆ ಎಲ್ಲಿಲ್ಲದ ಅಸಾಯಕತನ!.

ಹಾಗದರೆ ದಪ್ಪ ಆಗಿದ್ದು ನನ್ನ ಆಕ್ಷಮ್ಯ ಅಪರಾಧವೆ? ಹೌದು.....ಎನ್ನುತ್ತಿದೆ ನನ್ನ ಮನಸ್ಸು ಕೆಲವೊಮ್ಮೆ!.

ಕಡೆಗೂ ೧೫ ದಿನ  ಊಟ ಬಿಟ್ಟಾದರೂ ಸರಿ ಸಪೂರ ಆಗಲೇ ಬೇಕೆನ್ನುವ ಒಂದು ನಿರ್ಧಾರಕ್ಕೆ ಬಂದೆ. ಹಾಗೊ ಹೀಗೊ ಡಯೇಟ್ ಚಾರ್ಟ್ ತಂದೆ. ಅದರ ಪ್ರಕಾರ  1 ವಾರ ಬರೇ ಹಣ್ಣು ಹಂಪಲನ್ನು ತಿಂದು ಜೀವನ ಮಾಡಬೇಕಿತ್ತು.ಕಡೆಗೂ ಒಳ್ಳೆಯ ದಿನ ನೋಡಿ ನನ್ನ ಡಯಟ್ ನ್ನು ಶುರು ಹಚ್ಚಿಕೊಂಡೆ. ನನ್ನ ಪತಿರಾಯರು ಮತ್ತು ಮಗುವಿಗೆ ನನ್ನ ಕೈ ಆಡುಗೆಯನ್ನು ಚಾಚು ತಪ್ಪದೆ ಉಣಬಡಿಸಿದೆ. ಆದರೆ  ಅವರು ಉಟ ಮಾಡುವಾಗ ನಾನು ಮಾಡಿರುವ ಅಡಿಗೆ ರುಚಿ ಹೇಗಿರಬಹುದು ಎಂದು ಮನಸ್ಸಿಗೆ ಅನಿಸದಿರಲಿಲ್ಲ. ಹೇಗಾದರು ಆ  ದಿನ ನನ್ನ ಮನಸ್ಸನ್ನು ಹಿಡಿತದಲ್ಲಿ ಇರಿಸಿದೆ. ರಾತ್ರಿಯಾಗುವಷ್ಟರಲ್ಲಿ ನನ್ನ ಹಸಿವು ಹದಿನೈದು ದಿನ ಊಟಮಾಡದಿದ್ದ ಹಾಗೆ ಅನಿಸಿತು. ನಮ್ಮವರ ಊಟ ಮುಗಿಯುತಿದ್ದಂತೆ ಚೂರು ಪಾರು ಅನ್ನ ಸಾರು ಉಳಿದಿತ್ತು. ಭೀಮನ ಹೊಟ್ಟೆಗೆ ಕಾಸಿನ ಮದ್ದು! ಆ ಅನ್ನ ಸಾರಿಗೆ ಬೇಸರವಾಗಬಾರದಲ್ಲ! ಕಡೆಗೂ ನನ್ನ ಡಯಟ್ ಚಾರ್ಟ್ ನ್ನು  ಬದಿಗಿರಿಸಿ ಊಟ ಮಾಡಿದಾಗ ಆದ ಸಂತೋಷ ಹೇಳತೀರದು. ಸಂತೋಷ ನನಗಲ್ಲ ..ಅನ್ನ ಸಾರಿಗೆ ಮತ್ತು ನನ್ನ  ಹೊಟ್ಟೆಗೆ. ಯಾಕೆಂದ್ರೆ ಹೊಟ್ಟೆ ಹಸಿವು ಅಷ್ಟರ ಮಟ್ಟಿಗೆ ಇತ್ತು.ಹಾಗಗಿ ಇರುವ ಹಾಗೆಯೇ ಇರೋಣ ಎಂದು ಧ್ರಡ ಸಂಕಲ್ಪ ಮಾಡಿದ್ದೇನೆ.

 ನಾನು ಸಪೂರ ಆದಲ್ಲಿ ನನ್ನ ದಪ್ಪದಿಂದ ಆಗುವ ಕೆಲವು ಪ್ರಯೋಜನಗಳು ಇಲ್ಲದಾಗಬಹುದೆಂಬುದು ಈಗಿನ ನನ್ನ ವಾದ..ಯಾಕೆಂದ್ರೆ ಯಾವುದೇ ಸಭೆ ಸಮಾರಂಬಗಳಲ್ಲಿ ಎದ್ದು ಕಾಣುದು ದಪ್ಪದವರು ತಾನೇ? ಮಕ್ಕಳಿಗೆ " ಓ ದಪ್ಪದ ಅಂಟಿ ಕರಿಯಪ್ಪಾ " ಅಂದಾಗ ಮಗು ಚಾಚು ತಪ್ಪದೆ ನನ್ನ ಹತ್ತಿರ ಬಂದು ನನ್ನ ಕರಿಯುತ್ತೆ. ಪಾಪ ಅದಕ್ಕಾದರೂ ಉಪಕಾರ ನನ್ನ ದಪ್ಪದಿಂದ!
ಹಾಗಗಿ ನಾನು ದಪ್ಪವೇ ಇರೋಣ ಎಂಬ ನಿರ್ಧಾರಕ್ಕೆ ಬಂದೆ. ಯಾಕೆಂದರೆ "ಮದಗಜಗಮನೆ" ಎಂದು ಕರೆಯೋದು ದಪ್ಪದವರನ್ನೆ ತಾನೆ?

ಆದ್ರೆ  ನನ್ನ ಹೆಸರು ಬರೆದು ಮತ್ತು ನನ್ನ ದಪ್ಪದ ಬಗ್ಗೆ " ನೊ ಕಮೆಂಟ್ಸ್ ಪ್ಲೀಸ್ " ಎಂದು ಬೋರ್ಡ್ ಹಾಕುವಾಂತ ತಿರ್ಮಾನಕ್ಕೆ ಬಂದ್ದಿದ್ದೇನೆ....

ಯಾಕೆಂದ್ರೆ "ಸ್ವಾಮಿ ನಾವಿರೋದೇ  ಹೀಗೆ"!!!!!

23 comments:

ಚುಕ್ಕಿಚಿತ್ತಾರ said...

ಆಶಾ
ನೀವು ಬೇಜಾರು ಮಾಡ್ಕೋಬೇಡಿ..
ನಾನು ನನ್ನವರು ಎಲ್ಲೋ ಹೊರಟಿದ್ವಿ.. ದಾರಿಯಲ್ಲಿ ಯಾರ‍ೊ ಹೇಳ್ತಾ ಇದ್ರು.. ”ಎ೦ತಾ ಜೋಡಿ ಇಬ್ಬರದೂ” ಅ೦ದಾಗ ಎಷ್ಟು ಖುಶೀ ಆಯ್ತು! ಮತ್ತೆ ಅವರು ಎ೦ತ ಹೇಳಿದ್ರು ಅ೦ದ್ರೆ” ಹತ್ತರ ಅ೦ಕೆಯ೦ತೆ ಇದ್ದಾರೆ ಅ೦ದ್ರು ಕಣ್ರೀ... ನನ್ನನ್ನು ನೋಡಿ..!

ಬಿಡ್ರೀ...

ಸೀತಾರಾಮ. ಕೆ. / SITARAM.K said...

ಹೇ ಹೇ... ನಾನು ನಮ್ಮನೆಯವರು ನಿಮ್ಮ ಪಾರ್ತಿನೆ... ನಾವು ೧೦ ಅಲ್ಲ ೦೦ ಚೆನ್ನಾಗಿದೆ

ಗಿರೀಶ್.ಎಸ್ said...

ದಪ್ಪ ಇದ್ರೆ ಆ ರೀತಿ ಬೇರೆ use ಇದ್ಯ.... ನಮ್ಮ ಕೈ ಅಡುಗೆ ರುಚಿ ನೋಡಲಿಲ್ಲ ಅಂದ್ರೆ ಸಮಾಧಾನನೇ ಇರಲ್ಲ ಅಲ್ವ?

ಅನಂತ್ ರಾಜ್ said...

ಎಷ್ಟೋ ಸ೦ದರ್ಭಗಳಲ್ಲಿ/ಕಾರ್ಯಕ್ರಮಗಳಲ್ಲಿ ನನ್ನ presence ನ ಗುರುತಿಸೋರೇ ಇರಲ್ಲ..:) ನೀವೂ..ಬ೦ದಿದ್ರಾ ಅ೦ತ ಕೇಳೋರೇ ಜಾಸ್ತಿ...:) ಸಣ್ಣಗಿದ್ದವರ ಸ೦ಕಟ ನಿಮಗೆ ಗೊತ್ತಿಲ್ಲ..! ಆಶಾ ಅವರೆ.. ಹಾಸ್ಯ ಲೇಖನ ಚೆನಾಗಿದೆ..! ಅಭಿನ೦ದನೆಗಳು.


ಅನ೦ತ್

ಜಲನಯನ said...

ಈರ್ ಎಂಚಿನಾ ಸಪೂರ ಆಗೋದು...?? ಮಂಡೆ ಸಮ ಇಜ್ಜಿಯಾ?? ಎಲ್ಲರೂ ದಪ್ಪಾ ಆಗ್ಬೇಕು ಅಂತ ಬೋರಣ್ನನಹಿಟ್ಟಾ ತಿಂದ್ರೆ....ಹಹಹಹ
ಚನ್ನಾಗಿದೆ ಲೇಖನ ಫಾರ್ ಎ ಚೇಂಜೂ....

ಕನಸು ಕಂಗಳ ಹುಡುಗ said...

ಚನ್ನಾಗಿದೇರಿ ಆಶಾ.....
ಆದ್ರೆ ಫೋಟೋದಲ್ಲಿ full slim ಕಾಣ್ತೀರಪ್ಪಾ......

ಲೇಖನ ಚನ್ನಾಗಿದೆ....
ಸ್ವಲ್ಪ ಚನ್ನಾಗಿ ಗಟ್ಟಿಯಾಗಿರೋ ಗಾಡೀನೇ ಹತ್ತಿ ಎಲ್ಲಾದ್ರು ಹೊರಡೋವಾಗ......
(ತಮಾಶೆಗಂದೆ.....)
nice article

http://jyothibelgibarali.blogspot.com said...

ಹೂನ್ರಿ ವಿಜಯಾ,

ತಲೆ ಕೆಡಿಸಿಕೊಳ್ಳೊದಿಲ್ಲ , ಯಾಕೆಂದ್ರೆ

"ಸ್ವಾಮಿ ನಾವಿರೋದೇ ಹೀಗೆ"!!!!!

http://jyothibelgibarali.blogspot.com said...

ಸೀತಾರಾಮ್ sir ...
ಹೌದಾ ???
ಪರ್ವಾಗಿಲ್ಲ ಬಿಡಿ, ಯಾಕೆಂದ್ರೆ

"ಸ್ವಾಮಿ ನಾವಿರೋದೇ ಹೀಗೆ"!!!!!

http://jyothibelgibarali.blogspot.com said...

ಹೌದು ಗಿರೀಶ್ ...

ಇರೋದರಲ್ಲಿ ತ್ರಪ್ತಿ..

http://jyothibelgibarali.blogspot.com said...

ಧನ್ಯವಾದ ಅನಂತ್ ಸರ್,

ಆ ರೀತಿ ಬೇರೆ ಇದ್ಯಾ?

http://jyothibelgibarali.blogspot.com said...

ಅಂಚಾ ದಾಲಾ ಇಜ್ಜಿ ಸರ್ .. ಪೊಕ್ಕಡೆ ಒಂಜಿ ಬರೆನಾ.. ಅಂಡ ಇರ್ ಎನ್ಕ್ ಸಪೂರ ಪಂಡರಾ ... thanks ಅವೆ

http://jyothibelgibarali.blogspot.com said...

ಹೌದು ತಮ್ಮ
ಇನ್ನ್ನು ಮೇಲೆ ನೀನು ಹೇಳಿದ ರೀತಿನೇ ಗಟ್ಟಿಗಿರೋ ಗಾಡಿ ಹತ್ತುತ್ತೇನೆ
ಯಾವುದು ಲಾರಿನಾ????

ಸುಬ್ರಮಣ್ಯ said...

ಒಂದು ತಾಯತ ಕಟ್ಟಿಕೊಳ್ಳಿ. ತೆಳ್ಳಗಾಗ್ತೀರಿ!!!! ಹೆಚ್ಚಿನ ಮಾಹಿತಿಗೆ ನನ್ನ "ಬೊಜ್ಜು ಕರಗಿಸುವ ತಾಯತ" ಬ್ಲಾಗ್ ಬರಹ ಓದಿ- http://machikoppa.blogspot.com/2011/05/blog-post.html

Anonymous said...

ಸನ್ಯಾಸಿಗೆ ಸಂಸಾರ ಬೇಕು ಸಂಸಾರಿಗೆ ಸನ್ಯಾಸ ಬೇಕು ಅನ್ನೋ ತರ ತೆಳ್ಳಗಿರೋವ್ರು ದಪ್ಪ ಆಗೋಕೆ, ದಪ್ಪ ಇರೋವ್ರು ತೆಳ್ಳಗಾಗೋಕೆ try ಮಾಡ್ತಾನೆ ಇರ್ತಾರೆ :)

prabhamani nagaraja said...

ಹಹಹಾ ಬಹಳ ಚೆನ್ನಾಗಿ ಬರೆದಿದ್ದೀರಿ. ಅಭಿನ೦ದನೆಗಳು.ಪ್ರಯತ್ನ ಮು೦ದುವರೆದಿದ್ದರೆ ಇನ್ನೂ ಉತ್ತಮ ಲೇಖನ ಬರ್ತಿತ್ತೇನೋ! ಆಶಾ, ದಪ್ಪ-ಸಣ್ಣ ಮುಖ್ಯ ಅಲ್ಲ, ಆರೊಗ್ಯದಿ೦ದಿರಬೇಕು. ಅಲ್ವ?

KalavathiMadhusudan said...

haasya lekhana...chennaagide aasharavare.

http://jyothibelgibarali.blogspot.com said...

ಸುಬ್ರಮಣ್ಯ ಅವರೆ ನಾನು ನಿಮ್ಮ ಲೇಖನ ಓದಿದೆ .. ಚೆನ್ನಗಿದೆ ಉಪಾಯ..

ವ೦ದನೆಗಳು.

http://jyothibelgibarali.blogspot.com said...

ಸುಖೇಷ್ ಅವರೆ....

ನೀವು ಹೇಳಿದ್ದು ಸರಿ

http://jyothibelgibarali.blogspot.com said...

@ prabhamani nagaraja


ನಿಮ್ಮ ಪ್ರೋತ್ಸಾಹ ಸಿಗುತ್ತಿದ್ದರೆ ಖಂಡಿತ ಬರೆಯುತ್ತೇನೆ ಎಂಬ ಭರವಸೆ ಇದೆ..

http://jyothibelgibarali.blogspot.com said...

ಕಲರವ


thanks a ton

ನಾಗರಾಜ್ .ಕೆ (NRK) said...

Good one . . . :-)
me also almost 10 :-) :-)

ಈಶ್ವರ said...

ಚೆನ್ನಾಗಿದೆಬರಹ :) ದಪ್ಪ ಆಗಿ ಇನ್ನೂ :)

ಸಾಗರದಾಚೆಯ ಇಂಚರ said...

dappa iddavarige dappada chinte,
tellagiruvavarige tellagiddevembe chinte

namge chintegale mugiyuvudilla alvaa :)

nimma haasya lekhana ishta aytu