Pages

Sunday, December 11, 2011

ಮರಿಚಿಕೆ

ಮನಸಿನ ಆಸೆ ..
ಆಗಿರುವುದು ನಿರಾಸೆ
ಮರಿಚಿಕೆಯಾಯಿತೆ ಮನದಾಸೆ ..

ಮತ್ಯಾವುದೋ ಕನಸು ..
ಆದಾಗದು ಎಂದಿಗೂ ನನಸು ...
ಮರಿಚಿಕೆಯಾಯಿತೆ ಕನಸು ...

ಮರೆತರೂ ಮರೆಯಲಾಗದ ನೆನಪು ..
ಕಾಡುತಿದೆ ಕಹಿನೆನಪು..
ಮರಿಚಿಕೆಯಾಯಿತೆ  ಸಿಹಿ ನೆನಪು...

ಮತ್ಯಾಕೋ ಇನ್ನಷ್ಟು ಹಂಬಲ..
ಮುಂದೆ ಸಾಗಲೇಬೇಕೆಂಬ ಛಲ..
ಮರಿಚಿಕೆಯಾಗದಿರಲಿ ಆ ಫಲ...


(ಅದೆಷ್ಟೋ  ದಿನಗಳ ನಂತರದ ಒಂದು ಪುಟ್ಟ  ಪ್ರಯತ್ನ)


8 comments:

ಕನಸು ಕಂಗಳ ಹುಡುಗ said...

ಆಶಕ್ಕಾ....
ಪ್ರಯತ್ನಕ್ಕೆ ಫಲ ಇದ್ದೇ ಇದೆ....

ಒಳ್ಳೆ ಕೆಲಸ....

ಕನಸು ಮರೀಚಿಕೆಯಾಗದಿರಲಿ.....
ಕಹಿ ನೆನಪುಗಳಿದ್ದರೆ ಮರಿಚಿಕೆಯಾಗಿಬಿಡಲಿ.....
ಸಿಹಿ ನೆನಪುಗಳು ಸದಾ ಮನಸ್ಸಿನಲ್ಲಿ ಸುತ್ತುವ ಹಂಸ ಕಲ್ಪಗಳಾಗಲಿ.....

Pradeep Rao said...

Welcome back... ಈ ಬಾರಿಯೂ ಛಲ ಮರೀಚಿಕೆಯಾಗದೆ ಫಲ ನೀಡಲಿ ಎಂದು ಆಶಿಸುವೆ!

ಗಿರೀಶ್.ಎಸ್ said...

ಸೋಲೇ ಗೆಲುವಿನ ಮೆಟ್ಟಿಲು ಅಲ್ಲವೇ?
ನಿಮ್ಮ ಛಲ ಹಂಬಲಕ್ಕೆ ಈ ಬಾರಿ ಫಲ ಸಿಗುತ್ತದೆ ಎಂಬ ಆಶಾ ಭಾವನೆ ಇದೆ...
ಒಳಿತಾಗಲಿ...

Ashok.V.Shetty, Kodlady said...

Nice One Madam....

ಸೀತಾರಾಮ. ಕೆ. / SITARAM.K said...

ಮರೀಚಿಕೆಯಾಗದಿರಲಿ ಮನದ ಆಶೆಗಳ ಕನಸ ತೇರಿನ ಪ್ರಯತ್ನ.

ಲೋಕು ಕುಡ್ಲ.... said...

ಮನಸ್ಸಿನ ಆಸೆ ಕನಸುಗಳನ್ನು ಸುಂದರವಾಗಿ ಬಿಚ್ಚಿಟ್ಟಿದ್ದೀರಿ, ಮರೀಚಿಕೆಯಾಗದಿರಲಿ ಆಸೆ ಕನಸು ಎಂಬ ತೊಳಲು ನಿಮ್ಮ ಕಾವ್ಯ ಸಾಲುಗಳಲ್ಲಿ ಸೊಗಸಾಗಿ ಮೊಡಿ ಬಂದಿದೆ ಇನ್ನಷ್ಟು ಹುರುಪು ನಿಮ್ಮ ಕಾವ್ಯ ಕಡಲಲ್ಲಿ ಮೈದುಂಬಲಿ, ನಿಮಗೆ ಶುಭವಾಗಲಿ....

ಜಲನಯನ said...

ಆಶಾವ್ರೆ. ಮತ್ತೆ ಬಂದ್ರಲ್ಲಾ ಬ್ಲಾಗ್ ಲೇಖನಕ್ಕೆ...ಚನ್ನಾಗಿದೆ..ನನ್ನದೂ ಅದೇ ಹಾರೈಕೆ...
ಮತ್ಯಾಕೋ ಇನ್ನಷ್ಟು ಹಂಬಲ..
ಮುಂದೆ ಸಾಗಲೇಬೇಕೆಂಬ ಛಲ..
ಮರಿಚಿಕೆಯಾಗದಿರಲಿ ಆ ಫಲ...

Unknown said...

ಎಷ್ಟೊಂದು ಸೊಗಸಾಗಿದೆ....