Pages

ಶನಿವಾರ, ಏಪ್ರಿಲ್ 30, 2011

ನಿನಗಾಗಿ

ಅದ್ಯಾಕೊ
ನೀ ಜೊತೆಗಿದ್ದ ದಿನ 
ಬೀಗುತ್ತಿತ್ತು  ನನ್ನ ಮನ 
ನಾನೆಂದೆ ನೀನೆ ನನ್ನ ಪ್ರತಿ ಕ್ಷಣ 
ಅರಿಯದಾದೆ ನಿನ್ನೊಳಗಿನ ಮನ..... 


ಆದರೆ ,
ನೀ ದೂರವಾದೆ ಈ ದಿನ.
ಹ್ರದಯ ಮಂಕಾಯಿತು.... 
ಮಾತು ಮೌನವಾಯಿತು ....
ನನ್ನುಸಿರೇ ಬಾರವಾಯಿತು....


ಮತ್ತೆ .
ತೆರೆದೆ ಮನದ ಪ್ರತಿ  ಪುಟವ...
ಓದಿದೆ ನಿನ್ನೊಡನಿದ್ದ  ಪ್ರತಿ ನಿಮಿಷವ
ಗೋಚರಿಸಿದ್ದು  ವಾಸ್ತವ ...
ಮರೆಯಲಾರೆನು  ನೀ  ಕಲಿಸಿದ ಪಾಠವ ...


ಇಗ್ಯಾಕೊ,  
ಅನಿಸುತ್ತಿದೆ  ನೀನಾದೆ ಕಾಣದ ಕಡಲು
ಸಿಗಲಿ ನಿನಗೆ ಪ್ರೀತಿಯ ಹೊನಲು
ಹಾರೈಸುವೆ  ಶುಭ್ರ ಮನದಿ
ನಿನಗೆ ಒಳಿತಾಗಲು .....ನಿನಗೆ ಒಳಿತಾಗಲು .....

ಚಿತ್ರ ಕೃಪೆ: ಅಂತರ್ಜಾಲ