Pages

ಶನಿವಾರ, ಜೂನ್ 11, 2011

ಸೂತ್ರಧಾರಿ



"ಅಮ್ಮ"
 ನಿನ್ನ ತೋಳಿನ ಬಂದನ..
ಆಯಿತು ನನ್ನ ಮನ ನಂದನ 
ಮರೆಯಾಲಾರೆ ಆ ಅಲಿಂಗನ..
ಆಹಾ! ಅದುವೇ ಮಧುರ ರೋಮಂಚನ...


ಹೆಜ್ಜೆಯನಿಟ್ಟೆ ನಿನ್ನ ಹೆಜ್ಜೆಯ ಮೇಲೆ 
ತೋರಿಸಿದೆ ನಕ್ಷತ್ರ ಆಕಾಶದ ಮೇಲೆ 
ಸತಾಯಿಸಿದ್ದೆ  ಅಂದು ತೋರಿಸಿ  ನನ್ನ ಬಾಲ್ಯಲೀಲೆ 
ಆದರೂ ನೀ ಸುರಿಸಿದೆ  ಪ್ರೀತಿಯ ಸುರಿಮಳೆ .....

ನಿನ್ನ ಕೈ ತುತ್ತು ನೀಡಿದೆ 
ನನ್ನ ಕೈ ತಿದ್ದಿ ತೀಡಿದೆ
ನಾ ನಿನ್ನ ಶಿಕ್ಷಾರ್ಥಿಯಾದೆ 
ನಿನ್ನ ಗದರಿಕೆಗೆ ಗುರಿಯಾದೆ


ಗೊತ್ತಗಲಿಲ್ಲ ನಿನ್ನ ಗದರಿಕೆಯ ಗುಟ್ಟು 
ಈಗಾಗಿದೆ ಆ ನಿನ್ನ ಗುಟ್ಟು ರಟ್ಟು 
ಕೇಳುವರು ಎಲ್ಲಾ ನನ್ನ ಯಶಸ್ಸಿನ ಗುಟ್ಟು
ಮಾಡುವುದು ನನ್ನ ಕೈ ನಿನಗೆ ಬೊಟ್ಟು 


"ಅಮ್ಮ"
   ಇದು ನಿನ್ನ ಕಂದನ ಕರುಳಿನ
   ಕರೆಯೋಲೆ
  ನಿನ್ನ ನೆನಪು ನಿರಂತರ! ಚಿರಂತರ !
    ಮಧುರ ! ಸುಮಧುರ !




{ಬ್ಲಾಗ್ ಮಿತ್ರ ಪ್ರದೀಪ್ ಸಲಹೆಯಂತೆ ಎರಡು ಸಾಲುಗಳನ್ನು ಬದಲಾಯಿಸಿದ್ದೇನೆ  }
ಧನ್ಯವಾದಗಳು ಪ್ರದೀಪ್
ಚಿತ್ರ ಕೃಪೆ: ಅಂತರ್ಜಾಲ