Pages

ಶನಿವಾರ, ಜುಲೈ 2, 2011

ನೋವಿನ ವಿದಾಯ



ಹುಚ್ಚು ಕುದುರೆ ಮನಸ್ಸು 
ಕಾಣುತ್ತಿತ್ತು ಕನಸು 
ಗೊತ್ತಿದ್ದರೂ ಆದಾಗದು
ಎಂದಿಗೂ  ನನಸು...

ಹೇಳಿದೆ ನೀ ಎನಗೆ  ಚೆನ್ನ..
ಕರೆದೆ ನಾ ನಿನ್ನ ಚಿನ್ನ 
ಕೊಟ್ಟೆ ನನ್ನ ಹ್ರದಯವನ್ನ 
ಮತ್ಯಾಕೆ  ದೂರ ತಳ್ಳಿದೆ ಎನ್ನ..?

ನೆನಪೊಂದು  ಬೆಂಬಿಡದ ಬೇತಾಳ
ಗಾಯ ನೋವುಗಳೆಲ್ಲ  ಬಹಳ ಆಳ...
ಉದುರುತಿದೆ ಕಣ್ಣೀರು ಕಣ್ಣಂಚಿನಲಿ
ಬೆಂದಿಹುದು ಮನ ನಿನ್ನ ಬಲೆಯ ಜಾಲದಲಿ...

ಮರೆತರೂ ಮರೆಯಲಾರದ ನೆನಪು 
ಮಾಡಿರುವೆಯಲ್ಲ್ಲ ಅಚ್ಚಳಿಯದ ಛಾಪು
ಆರ್ಭಟಿಸುತಿದೆ  ಮೌನದ ಅಲೆ
ಉರಿಯುತಿದೆ ಮನದೊಳಗೆ ಅಗ್ನಿಯ ಜ್ವಾಲೆ..

ಬೇಡವಾಗಿದೆ ನಿನ್ನ ಕಣ್ಣಮುಚ್ಚಾಲೆ
ಮಗದೊಮ್ಮೆ ತೋರಿಸದಿರು ನಿನ್ನ ಲೀಲೆ ..
ಕಾದಿಹೆನು ಸೂರ್ಯನ ಉದಯಕ್ಕಾಗಿ
ಮತ್ತೆ ಜೀವನದ ಹೊಸ ಹೆಜ್ಜೆಗಾಗಿ....