"ಅಮ್ಮ"
ನಿನ್ನ ತೋಳಿನ ಬಂದನ..
ಆಯಿತು ನನ್ನ ಮನ ನಂದನ
ಮರೆಯಾಲಾರೆ ಆ ಅಲಿಂಗನ..
ಆಹಾ! ಅದುವೇ ಮಧುರ ರೋಮಂಚನ...
ಹೆಜ್ಜೆಯನಿಟ್ಟೆ ನಿನ್ನ ಹೆಜ್ಜೆಯ ಮೇಲೆ
ತೋರಿಸಿದೆ ನಕ್ಷತ್ರ ಆಕಾಶದ ಮೇಲೆ
ಸತಾಯಿಸಿದ್ದೆ ಅಂದು ತೋರಿಸಿ ನನ್ನ ಬಾಲ್ಯಲೀಲೆ
ಆದರೂ ನೀ ಸುರಿಸಿದೆ ಪ್ರೀತಿಯ ಸುರಿಮಳೆ .....ನಿನ್ನ ಕೈ ತುತ್ತು ನೀಡಿದೆ
ನನ್ನ ಕೈ ತಿದ್ದಿ ತೀಡಿದೆ
ನಾ ನಿನ್ನ ಶಿಕ್ಷಾರ್ಥಿಯಾದೆ
ನಿನ್ನ ಗದರಿಕೆಗೆ ಗುರಿಯಾದೆ
ಗೊತ್ತಗಲಿಲ್ಲ ನಿನ್ನ ಗದರಿಕೆಯ ಗುಟ್ಟು
ಈಗಾಗಿದೆ ಆ ನಿನ್ನ ಗುಟ್ಟು ರಟ್ಟು
ಕೇಳುವರು ಎಲ್ಲಾ ನನ್ನ ಯಶಸ್ಸಿನ ಗುಟ್ಟು
ಮಾಡುವುದು ನನ್ನ ಕೈ ನಿನಗೆ ಬೊಟ್ಟು
"ಅಮ್ಮ"
ಇದು ನಿನ್ನ ಕಂದನ ಕರುಳಿನ
ಕರೆಯೋಲೆ
ನಿನ್ನ ನೆನಪು ನಿರಂತರ! ಚಿರಂತರ !
ಮಧುರ ! ಸುಮಧುರ !
{ಬ್ಲಾಗ್ ಮಿತ್ರ ಪ್ರದೀಪ್ ಸಲಹೆಯಂತೆ ಎರಡು ಸಾಲುಗಳನ್ನು ಬದಲಾಯಿಸಿದ್ದೇನೆ }
ಧನ್ಯವಾದಗಳು ಪ್ರದೀಪ್
ಚಿತ್ರ ಕೃಪೆ: ಅಂತರ್ಜಾಲ
{ಬ್ಲಾಗ್ ಮಿತ್ರ ಪ್ರದೀಪ್ ಸಲಹೆಯಂತೆ ಎರಡು ಸಾಲುಗಳನ್ನು ಬದಲಾಯಿಸಿದ್ದೇನೆ }
ಧನ್ಯವಾದಗಳು ಪ್ರದೀಪ್
ಚಿತ್ರ ಕೃಪೆ: ಅಂತರ್ಜಾಲ
ಚೆಂದದ ಸಾಲುಗಳು ಆಶಾರವರೇ..
ಪ್ರತ್ಯುತ್ತರಅಳಿಸಿಆದರೆ ಕೆಳಗಿನೆರಡು ಸಾಲುಗಳಲ್ಲಿ ಪದಗಳು ಏಕೋ ಸ್ವಲ್ಪ ಸರಿಹೊಂದುತ್ತಿಲ್ಲ ಎಂಬ ಅನಿಸಿಕೆ ಮೂಡಿತು..
"ಸತಾಯಿಸಿದೆ ಆಡಿಸಿ ನನ್ನ ಬಾಲ್ಯಲೀಲೆ "
"ಮಾಡುವುದು ನನ್ನ ಕೈ ತೋರಿಸಿ ನಿನ್ನ ಬೊಟ್ಟು"
ಮಿಕ್ಕಂತೆ ಎಲ್ಲಾ ಚೆನ್ನಾಗಿದೆ!
ಚೆನ್ನಾಗಿದೆ ಮೇಡಂ.
ಪ್ರತ್ಯುತ್ತರಅಳಿಸಿಪ್ರದಿಪ್,
ಪ್ರತ್ಯುತ್ತರಅಳಿಸಿನನ್ನ ಯಶಸ್ಸಿನ ಹಿಂದೆ ಅಮ್ಮ ನೀನೆ ಎಂದು ಎಲ್ಲರಿಗು ನಿನ್ನನ್ನೆ ಬೊಟ್ಟು ಮಾಡಿ ತೋರಿಸುವೆ ಎಂದಾಗಿತ್ತು.
ನಿಮ್ಮ ಅನಿಸಿಕೆ, ಸಲಹೆಗೆ ಸ್ವಾಗತ... ಹಾಗು ಧನ್ಯವಾದಗಳು
ವಿಜಯ ನಿಮ್ಮ ಪ್ರತಿಕ್ರಿಗೆ ದನ್ಯವಾದಗಳು ... ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ... ಬರುತ್ತಿರಿ
ಪ್ರತ್ಯುತ್ತರಅಳಿಸಿಸತೀಶ್ ಸರ್ ....
ಪ್ರತ್ಯುತ್ತರಅಳಿಸಿದನ್ಯವಾದಗಳು
Itz Nice !!! ammana bagge bareda saalugalu ishta ayitu...
ಪ್ರತ್ಯುತ್ತರಅಳಿಸಿthanks @ Girish
ಪ್ರತ್ಯುತ್ತರಅಳಿಸಿಅಮ್ಮ-ಮಗುವಿನ ಸ೦ಬ೦ಧ ದೈವೀಕವಾದದ್ದು. ಆಪ್ತತೆಯ ಪರಾಕಾಷ್ಟೆಯ ಭಾವ ಅದು. ಭಾವಕ್ಕೆ ನ್ಯಾಯ ಒದಗಿಸಿದ್ದೀರಿ. ಅಭಿನ೦ದನೆಗಳು.
ಪ್ರತ್ಯುತ್ತರಅಳಿಸಿಅನ೦ತ್
ಅಮ್ಮ ಅನ್ನೋ ಪದದ ಶಕ್ತಿಯೇ ಹಾಗೆ....
ಪ್ರತ್ಯುತ್ತರಅಳಿಸಿಅದು ನಮ್ಮಲ್ಲಿ ನಿರಂತರ ಸ್ಪಂದನ ನೀಡುವ ಜೀವಿಕೆ.....
ಅಮ್ಮನ ಬಗ್ಗೆ ಎಷ್ಟು ಬರೆದರೂ ಅದು ಸ್ವಲ್ಪವೇ ಎಂದೆನಿಸುತ್ತದೆ.
ಕವನ ಚನ್ನಾಗಿದೆ...
ಶುದ್ಧ ಮಗು ಬರೆದಂತೆಯೇ ಇದೆ...
ಮುಂದುವರೆಯಲಿ.....
thanks a lot ...keep reading ..
ಪ್ರತ್ಯುತ್ತರಅಳಿಸಿಅನಂತ್ sir
ಪ್ರತ್ಯುತ್ತರಅಳಿಸಿಧನ್ಯವಾದಗಳು ....
prasa kavanadallina aarambhada hantagalu chennagive.
ಪ್ರತ್ಯುತ್ತರಅಳಿಸಿಸೀತಾರಾಮ್ ಸರ್...ಧನ್ಯವಾದಗಳು.
ಪ್ರತ್ಯುತ್ತರಅಳಿಸಿ