ಅನುಕಂಪಕ್ಕಿಂತ ಅವಕಾಶ ಸಿಕ್ಕರೆ .........
ಡಿಸೆಂಬರ್ ೪ ರಂದು ಎಲ್ಲಾ ನ್ಯೂಸ್ ಚಾನೆಲ್ ನ್ಯೂಸ್ ಪೇಪರ್ ಗಳಲ್ಲಿ ಅಲ್ಲಿ ಇಲ್ಲಿ ಅಂಗವಿಕಲರ ದಿನಾಚರಣೆ ಆಚರಿಸಿದ ಸುದ್ದಿ !!!!.
ನಾನು ಹೇಳು ತ್ತಿರುವುದು ಬುದ್ದಿ ಮಾಂದ್ಯರ ಬಗ್ಗೆ ........,
ನಂಗೆ ಅದೇಷ್ಟೋ ಜನ "ಹೋ .." ಹುಬ್ಬೇರಿಸಿ ದವರು ಇದ್ದಾರೆ ,ಇನ್ನು ಕೆಲವರು "ಅವರನ್ನು ನೀನು ಹೇಗೆ ಮೆಂಟ್ಯೆನ್ ಮಾಡುತೀಯಾ?"
ಇದೆಲ್ಲಾ ಪ್ರ ಶ್ನೆಗೆ ನನ್ನ ಉತ್ತರ ಕೇವಲ ನಗು ಹಾಗೂ ನನ್ನ ಕೆಲಸದ ಮೇಲೆ ನನಗಿರುವ ಅಭಿಮಾನ.!!
ಪ್ರತಿಯೊಬ್ಬ ಮನುಷ್ಯನಿಗೂ ಅವನದೆ ಆದ ಪ್ರತಿಭೆ ಗಳಿರುತ್ತದೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಅಂತೆಯೆ ಬುದ್ದಿ ಮಾಂದ್ಯರೂ ಅವರದೆ ಆದ ಪ್ರತಿಬೆ ಹೊಂದಿರುತ್ತಾರೆ ,ಹಾಗೂ ಅದು ನಿಜಕ್ಕೂ ಶ್ಲಾಘನೀ ಯ...ಆದ್ದರಿಂದಲೇ ಅವರನ್ನು ವಿಶೇಷ ಸಾಮಥ್ಯದ ಮಕ್ಕಳು .. ಎನ್ನು ತ್ತಿರುವುದು.
ಇತೀಚಿನ ದಿನಗಳಲ್ಲಿ ಸಾಮಾನ್ಯ ಮಕ್ಕಳಿಗೆ ಸಿಗುತ್ತಿರುವ ಸವಲತ್ತು ಅಥವಾ ಅವಕಾಶ ನಮ್ಮ ವಿಶೇಷ ಮಕ್ಕಳಿಗೆ ಸಿಗಲಿ ...ಅಂಗವಿಕಲತೆ ಶಾಪವಾಗದಿರಲಿ
ಅವರಿಗೆ ಇನ್ನಷ್ಟು ಅವಕಾಶ ಗ ಳು ಸಿಕ್ಕಿ ಅವರು ನಮ್ಮ ಸಮಾಜಕ್ಕೆ ಆಸ್ತಿಯಾಗಲಿ.......