Pages

Saturday, April 30, 2011

ನಿನಗಾಗಿ

ಅದ್ಯಾಕೊ
ನೀ ಜೊತೆಗಿದ್ದ ದಿನ 
ಬೀಗುತ್ತಿತ್ತು  ನನ್ನ ಮನ 
ನಾನೆಂದೆ ನೀನೆ ನನ್ನ ಪ್ರತಿ ಕ್ಷಣ 
ಅರಿಯದಾದೆ ನಿನ್ನೊಳಗಿನ ಮನ..... 


ಆದರೆ ,
ನೀ ದೂರವಾದೆ ಈ ದಿನ.
ಹ್ರದಯ ಮಂಕಾಯಿತು.... 
ಮಾತು ಮೌನವಾಯಿತು ....
ನನ್ನುಸಿರೇ ಬಾರವಾಯಿತು....


ಮತ್ತೆ .
ತೆರೆದೆ ಮನದ ಪ್ರತಿ  ಪುಟವ...
ಓದಿದೆ ನಿನ್ನೊಡನಿದ್ದ  ಪ್ರತಿ ನಿಮಿಷವ
ಗೋಚರಿಸಿದ್ದು  ವಾಸ್ತವ ...
ಮರೆಯಲಾರೆನು  ನೀ  ಕಲಿಸಿದ ಪಾಠವ ...


ಇಗ್ಯಾಕೊ,  
ಅನಿಸುತ್ತಿದೆ  ನೀನಾದೆ ಕಾಣದ ಕಡಲು
ಸಿಗಲಿ ನಿನಗೆ ಪ್ರೀತಿಯ ಹೊನಲು
ಹಾರೈಸುವೆ  ಶುಭ್ರ ಮನದಿ
ನಿನಗೆ ಒಳಿತಾಗಲು .....ನಿನಗೆ ಒಳಿತಾಗಲು .....

ಚಿತ್ರ ಕೃಪೆ: ಅಂತರ್ಜಾಲ




13 comments:

ಅನಂತ್ ರಾಜ್ said...

manadaalada bhavanegalu sundaravagi horahommive. abhinandanegalu.

ananth

Gubbachchi Sathish said...

Shuba vidaya!

http://jyothibelgibarali.blogspot.com said...

thank u Ananth Sir.

http://jyothibelgibarali.blogspot.com said...

ಶುಭವಿದಾಯವೇ ಆಶಾವಾದ (ನನ್ನವಾದ).....

ದನ್ಯವಾದಗಳು ಸತೀಶ್ ಸರ್....

Pradeep Rao said...

ಭಾವ ಭರಿತ ಸಾಲುಗಳು ಚೆನ್ನಾಗಿ ಮೂಡಿವೆ.. ಬರೆಯುತ್ತಿರಿ..

http://jyothibelgibarali.blogspot.com said...

Pradeep ,
thanks a lot..

ಜಲನಯನ said...

ಪುಟ್ಟ ಸಾಲುಗಳ ಸರಳ ಮಾತುಗಳು ಹೆಚ್ಚು ಮನಕ್ಕೆ ತಾಕುವಂತಿವೆ...ಚನ್ನಾಗಿದೆ ಅಂದು ಇಂದಿನ ನಡುವಣ ತಾಕಲಾಟಗಳ ಭಾವಮಂಥನ

ಗಿರೀಶ್.ಎಸ್ said...

ಹೃದಯದಾಳದ ಮಾತುಗಳು...ಚೆನ್ನಾಗಿದೆ..ಅಷ್ಟೇ ಸರಳವಾಗಿದೆ..

http://jyothibelgibarali.blogspot.com said...

ಅಜಾದ್ ಸರ್...ದನ್ಯವಾದಗಳು

ಅಂದು ಇಂದಿನ ನಡುವಣ ತಾಕಲಾಟಗಳೇ ಜೀವನ.... ಅಲ್ಲವೇ ಸರ್?

http://jyothibelgibarali.blogspot.com said...

ದನ್ಯವಾದಗಳು ಗಿರೀಶ್.

ತೇಜಸ್ವಿನಿ ಹೆಗಡೆ said...

Nice poem.. keep writing.

http://jyothibelgibarali.blogspot.com said...

ತೇಜಸ್ವಿನಿ ಮೇಡಂ..........
ದನ್ಯವಾದಗಳು

ಸೀತಾರಾಮ. ಕೆ. / SITARAM.K said...

nice one....