ಹುಚ್ಚು ಕುದುರೆ ಮನಸ್ಸು
ಗೊತ್ತಿದ್ದರೂ ಆದಾಗದು
ಎಂದಿಗೂ ನನಸು...
ಎಂದಿಗೂ ನನಸು...
ಹೇಳಿದೆ ನೀ ಎನಗೆ ಚೆನ್ನ..
ಕರೆದೆ ನಾ ನಿನ್ನ ಚಿನ್ನ
ಕೊಟ್ಟೆ ನನ್ನ ಹ್ರದಯವನ್ನ
ಮತ್ಯಾಕೆ ದೂರ ತಳ್ಳಿದೆ ಎನ್ನ..?
ನೆನಪೊಂದು ಬೆಂಬಿಡದ ಬೇತಾಳ
ಗಾಯ ನೋವುಗಳೆಲ್ಲ ಬಹಳ ಆಳ...
ಉದುರುತಿದೆ ಕಣ್ಣೀರು ಕಣ್ಣಂಚಿನಲಿ
ಬೆಂದಿಹುದು ಮನ ನಿನ್ನ ಬಲೆಯ ಜಾಲದಲಿ...
ಮರೆತರೂ ಮರೆಯಲಾರದ ನೆನಪು
ಮಾಡಿರುವೆಯಲ್ಲ್ಲ ಅಚ್ಚಳಿಯದ ಛಾಪು
ಆರ್ಭಟಿಸುತಿದೆ ಮೌನದ ಅಲೆ
ಉರಿಯುತಿದೆ ಮನದೊಳಗೆ ಅಗ್ನಿಯ ಜ್ವಾಲೆ..
ಬೇಡವಾಗಿದೆ ನಿನ್ನ ಕಣ್ಣಮುಚ್ಚಾಲೆ
ಮಗದೊಮ್ಮೆ ತೋರಿಸದಿರು ನಿನ್ನ ಲೀಲೆ ..
ಕಾದಿಹೆನು ಸೂರ್ಯನ ಉದಯಕ್ಕಾಗಿ
ಮತ್ತೆ ಜೀವನದ ಹೊಸ ಹೆಜ್ಜೆಗಾಗಿ....
ಆರ್ಭಟಿಸುತಿದೆ ಮೌನದ ಅಲೆ
ಉರಿಯುತಿದೆ ಮನದೊಳಗೆ ಅಗ್ನಿಯ ಜ್ವಾಲೆ..
ಬೇಡವಾಗಿದೆ ನಿನ್ನ ಕಣ್ಣಮುಚ್ಚಾಲೆ
ಮಗದೊಮ್ಮೆ ತೋರಿಸದಿರು ನಿನ್ನ ಲೀಲೆ ..
ಕಾದಿಹೆನು ಸೂರ್ಯನ ಉದಯಕ್ಕಾಗಿ
ಮತ್ತೆ ಜೀವನದ ಹೊಸ ಹೆಜ್ಜೆಗಾಗಿ....
21 comments:
ಭಾವ ತುಂಬಿದ ಕವನ...
ಚೆನ್ನಾಗಿದೆ
ಜೀವನದ ಹೊಸ ಹೆಜ್ಜೆಗೆ ಸಜ್ಜಾಗಿ ಮುನ್ನಡೆಯಿರಿ. ಅಭಿನ೦ದನೆಗಳು.
ಅನ೦ತ್
ಕಾದಿಹೆನು ಸೂರ್ಯನ ಉದಯಕ್ಕಾಗಿ
ಮತ್ತೆ ಜೀವನದ ಹೊಸ ಹೆಜ್ಜೆಗಾಗಿ.....bhaavapurnavaagiruva saalugalu Madam :-)
ಭಾವನೆಗಳಿಗೆ ರೆಕ್ಕೆ ಹಚ್ಚಿ ಹೀಗೇ ತೇಲಿಬಿಡಬಹುದು ..
ಮನಸಿನ ದುಗುಡಗಳ ಹೀಗೇ ಹಂಚಿಕೊಳ್ಳಲು ಬಹುದು..
ಆಶಾವ್ರೆ ಚನ್ನಾಗಿದೆ ಕವನ
ಚೆನ್ನಾಗಿ ಮೂಡಿದೆ ನಿಮ್ಮ ಕವನ. ಶುಭವಾಗಲಿ...
ಕೆಲಸದೊತ್ತಡದಿಂದ ಬಹಳ ದಿನ ಇತ್ತ ಬರಲು ಸಾಧ್ಯವಾಗಿರಲಿಲ್ಲ.. Very nice lines!
ಅನ೦ತ್ ಸರ್
ಧನ್ಯವಾದಗಳು
@ ಸವಿಗನಸು
ವ೦ದನೆಗಳು.
ಗಿರೀಶ್,
ವ೦ದನೆಗಳು.
ಹ ಹ ಹ ಅಜಾದ್ ಸರ್,
ಧನ್ಯವಾದಗಳು. ಇದೆಲ್ಲವೂ ನನ್ನ ಕಲ್ಪನೆಗಳು ಆಷ್ಟೆ!!!!
@ Pradeep n satheesha sir..
Thnks a lot
ಚನ್ನಾಗಿದೆ ಕವನ
nice
ಸೂರ್ಯ ಕಿರಣದ ತಾಪಕ್ಕೆ ಜ್ವಲಿಸಲಿ ಬಲೆಯು
ಅದರ ಬೆಳಕಿಗೆ ಬೆಳಗಲಿ ಸ್ವಚಂದ ಜೀವನವು ..
ಭಾವಪೂರ್ಣ ಕವನ ಜ್ಯೋತಿ.. ತುಂಬಾ ಇಷ್ಟವಾಯಿತು....:)
ಸೂರ್ಯ ಕಿರಣದ ತಾಪಕ್ಕೆ ಜ್ವಲಿಸಲಿ ಬಲೆಯು
ಅದರ ಬೆಳಕಿಗೆ ಬೆಳಗಲಿ ಸ್ವಚಂದ ಜೀವನವು ..
ಭಾವಪೂರ್ಣ ಕವನ ಜ್ಯೋತಿ.. ತುಂಬಾ ಇಷ್ಟವಾಯಿತು...
ಸೂರ್ಯ ಕಿರಣದ ತಾಪಕ್ಕೆ ಜ್ವಲಿಸಲಿ ಬಲೆಯು
ಅದರ ಬೆಳಕಿಗೆ ಬೆಳಗಲಿ ಸ್ವಚಂದ ಜೀವನವು ..
ಭಾವಪೂರ್ಣ ಕವನ ಜ್ಯೋತಿ.. ತುಂಬಾ ಇಷ್ಟವಾಯಿತು...
ಭಾವಪೂರ್ಣ ಹಾರೈಕೆ ...ಶುಭವಾಗಲಿ. ಶುಭ
ಸೀತಾರಾಮ ಸರ್
ಧನ್ಯವಾದಗಳು.
vijaya ..
ಧನ್ಯವಾದಗಳು.
mam,,nimma blogge nannadu modala bheti,,tumba chennagide,,keep writing
ಸತ್ಯರವರೆ .....
ನನ್ನ ಬ್ಲಾಗ್ ಗೆ ನಿಮಗೆ ಆತ್ಮೀಯ ಸ್ವಾಗತ ....ಧನ್ಯವಾದಗಳು
Post a Comment