ಅನುಕಂಪಕ್ಕಿಂತ ಅವಕಾಶ ಸಿಕ್ಕರೆ .........
ಡಿಸೆಂಬರ್ ೪ ರಂದು ಎಲ್ಲಾ ನ್ಯೂಸ್ ಚಾನೆಲ್ ನ್ಯೂಸ್ ಪೇಪರ್ ಗಳಲ್ಲಿ ಅಲ್ಲಿ ಇಲ್ಲಿ ಅಂಗವಿಕಲರ ದಿನಾಚರಣೆ ಆಚರಿಸಿದ ಸುದ್ದಿ !!!!.
ನಾನು ಹೇಳು ತ್ತಿರುವುದು ಬುದ್ದಿ ಮಾಂದ್ಯರ ಬಗ್ಗೆ ........,
ನಂಗೆ ಅದೇಷ್ಟೋ ಜನ "ಹೋ .." ಹುಬ್ಬೇರಿಸಿ ದವರು ಇದ್ದಾರೆ ,ಇನ್ನು ಕೆಲವರು "ಅವರನ್ನು ನೀನು ಹೇಗೆ ಮೆಂಟ್ಯೆನ್ ಮಾಡುತೀಯಾ?"
ಇದೆಲ್ಲಾ ಪ್ರ ಶ್ನೆಗೆ ನನ್ನ ಉತ್ತರ ಕೇವಲ ನಗು ಹಾಗೂ ನನ್ನ ಕೆಲಸದ ಮೇಲೆ ನನಗಿರುವ ಅಭಿಮಾನ.!!
ಪ್ರತಿಯೊಬ್ಬ ಮನುಷ್ಯನಿಗೂ ಅವನದೆ ಆದ ಪ್ರತಿಭೆ ಗಳಿರುತ್ತದೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಅಂತೆಯೆ ಬುದ್ದಿ ಮಾಂದ್ಯರೂ ಅವರದೆ ಆದ ಪ್ರತಿಬೆ ಹೊಂದಿರುತ್ತಾರೆ ,ಹಾಗೂ ಅದು ನಿಜಕ್ಕೂ ಶ್ಲಾಘನೀ ಯ...ಆದ್ದರಿಂದಲೇ ಅವರನ್ನು ವಿಶೇಷ ಸಾಮಥ್ಯದ ಮಕ್ಕಳು .. ಎನ್ನು ತ್ತಿರುವುದು.
ಇತೀಚಿನ ದಿನಗಳಲ್ಲಿ ಸಾಮಾನ್ಯ ಮಕ್ಕಳಿಗೆ ಸಿಗುತ್ತಿರುವ ಸವಲತ್ತು ಅಥವಾ ಅವಕಾಶ ನಮ್ಮ ವಿಶೇಷ ಮಕ್ಕಳಿಗೆ ಸಿಗಲಿ ...ಅಂಗವಿಕಲತೆ ಶಾಪವಾಗದಿರಲಿ
ಅವರಿಗೆ ಇನ್ನಷ್ಟು ಅವಕಾಶ ಗ ಳು ಸಿಕ್ಕಿ ಅವರು ನಮ್ಮ ಸಮಾಜಕ್ಕೆ ಆಸ್ತಿಯಾಗಲಿ.......
2 comments:
ನಮಸ್ಕಾರ.
ನಿಮ್ಮ ಅನಿಸಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ. ನಿಜ... ಎಲ್ಲರಲ್ಲೂ ಚೈತನ್ಯ ಸುಪ್ತವಾಗಿರುತ್ತದೆ. ಯಾರೂ ಅಚೇತನರಲ್ಲ. ನಿಜವಾಗಿ ನೋಡಿದರೆ ಈ ಸಮಾಜದಲ್ಲಿ ಅದೆಷ್ಟು ಮಾನಸಿಕ ಅಸ್ವಸ್ಥರಿದ್ದಾರೆ. ವಿಕೃತ ಮನಸಿನವರಿದ್ದಾರೆ. ಅಂತಹವರಿಗೆ ಬೇಕಿರುವುದು ಅನುಕಂಪ. ವಿಶೇಷ ಮಕ್ಕಳಿಗೆ, ದೈಹಿಕವಾಗಿ ಸಬಲರಾಗಿಲ್ಲದಿದ್ದರೂ ಮಾನಸಿಕವಾಗಿ ಸಶಕ್ತರಾಗಿರುವವರಿಗೆ ಇರುವಷ್ಟು ಚೈತನ್ಯ, ಹುಮ್ಮಸ್ಸು ಎಲ್ಲಾ ರೀತಿಯಲ್ಲೂ ಸರಿಯಾಗಿರುವವರಲ್ಲಿ ಇರುವುದು ವಿರಳ!
ಅವಕಾಶ ಸಮಾನತೆ ಕೊಟ್ಟರೆ ಅನುಕಂಪ ಕೀಳಿರಿಮೆ ತರುತ್ತದೆ.
ಸಾಧ್ಯವಾದಾಗ ನನ್ನ ಬ್ಲಾಗಿನಲ್ಲಿರುವ ಈ ಎರಡು ಲಿಂಕ್‌ಗಳಿಗೆ ಭೇಟಿಕೊಡಿ...
http://manasa-hegde.blogspot.com/2008/01/blog-post_622.html
http://manasa-hegde.blogspot.com/2008/12/blog-post.html
&
http://manasa-hegde.blogspot.com/2008/12/blog-post_12.html
ನಿಮ್ಮ ಕಾರ್ಯಕ್ಕೆ ನನ್ನ ಬೆಂಬಲವಿದೆ. ಯಶಸ್ಸು ನಿಮ್ಮದಾಗಲಿ.
ಆಶಾ..
ಸ೦ಕ್ರಮಣಕ್ಕೆ ಹೊಸ ಭರವಸೆಗಳೊ೦ದಿಗೆ ನಿಮ್ಮ ಬ್ಲಾಗ್ ಮೂಡಿದೆ..
ನಿಮ್ಮ ಕಾರ್ಯಕ್ಕೆ ಜಯ ಸಿಗಲಿ... ಬರೆಯುತ್ತಿರಿ..
Post a Comment