ಆಡು ಮಾತು, ಸಂಸ್ಕ್ರತಿ ಮತ್ತು ಮನೋಶಾಸ್ತ್ರ
ನಾನು ಮನೋವಿಜ್ಞಾನದ ವಿದ್ಯಾರ್ಥಿಯಾಗಿದ್ದಾಗ ಅಮ್ಮ ಪ್ರತಿ ಸಲ ಏನಾದ್ರು ಆಡು ಮಾತು, ಅಂದ್ರೆ ಸಾಕು ಅದು "ಅದೆಲ್ಲಾ ಸುಮ್ಮನೆ" ಎಂದು ಹೇಳಿ ಅವರನ್ನು ಟೀಕಿಸಿ ನಕ್ಕಿದ್ದು ಇದೆ. ಹಾಗೆ ಅದೆಷ್ಟೋ ಬಾರಿ ತಲೆ ಕೆಡಿಸಿ ಕೊಂಡದ್ದೂ ಇದೆ.
ಅವರು ಹೇಳುತ್ತಿದ್ದ ಕೆಲವೋಂದು ಮಾತುಗಳು ಮನೋಶಾಸ್ತ್ರಕ್ಕೆ ಏಷ್ಟೋಂದು ಹೋಲಿಕೆ ಇದೆ ಎಂದು ಈಗ ನನಿಗೆ ಅನಿಸುತ್ತಿದೆ.
ಕುಟುಂಬ ಮನುಷ್ಯನ ಜೀವನದಲ್ಲಿ ಅತೀ ಮುಖ್ಯ ಅಂಶ. ಅದು ಪ್ರತಿಯೊಂದು ಮನುಷ್ಯನ ಪ್ರತಿಬಿಂಬ. ಕುಟುಂಬದಲ್ಲಿ ಆರೋಗ್ಯಕರ ವಾತವರಣವಿದ್ದಲ್ಲಿ ಮನುಷ್ಯನ ಆಲೋಚನೆಯು ಸಕಾರತ್ಮಕವಾಗಿರುತ್ತದೆ. ಕುಟುಂಬದಲ್ಲಿ ಬರಿ ಅನುವಂಶಿಯತೆ (heridity or nature ) ಮಾತ್ರವಲ್ಲದೆ ಬೆಳೆಯುವ ರೀತಿ (narture) ಸಹ ಬಹಳ ಮುಖ್ಯ.
ನಮ್ಮ ಸಂಸ್ಕ್ರತಿ ಯಲ್ಲಿ ಕುಟುಂಬದ ವಿವಿದ ಪಾತ್ರಗಳ ಗುಣಗಳು ಜವಾಭ್ದಾರಿಗಳು ಇವೆ . ಆದರಂತೆ ನಡೆದರೆ ಗೊಂದಲಗಳು ಕಡಿಮೆ. ಸಮತೋಲನ ಹೆಚ್ಚು.
ನಮ್ಮ ಸಂಸ್ಕತಿಯು ನಮಗೆ ಹಲವು ಸನ್ನಿವೇಶಗಳ ಹಾಗೂ ಪಾತ್ರಗಳ ಚಿತ್ರಣಗಳನ್ನು ಕೊಟ್ಟು ನಾವು ಹೇಗೆ ಇದ್ದರೆ ನಮ್ಮ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಿದೆ.,
"ತಾಯಿಯಂತೆ ಮಗಳು, ನೂಲಿನಂತೆ ಸೀರೆ" ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲ. . ಇತ್ಯಾದಿ ... ಇಂತಹ ನಮ್ಮ ಹಿರಿಯಯರು ಅನುಭವದಿಂದ ಆಡಿದ ಮಾತುಗಳನ್ನು ಸಮಾಜ ಮನೋಶಾಸ್ತ್ರಜ್ನರು ಆನೇಕ ಅದ್ಯಯನದಿಂದ ಸಮಥಿ೯ಸಿದ್ದಾರೆ.
ನಾವೆಲ್ಲ ಆಡು ಮಾತು, ಸಂಸ್ಕ್ರತಿ ಮತ್ತು ಮನೋಶಾಸ್ತ್ರ ಇವೆಲ್ಲವನ್ನು ಮುಂದಿಟ್ಟುಕೊಂಡು ಸಕಾರತ್ಮಕವಾಗಿ ನಮ್ಮ ಕುಟುಂಬವನ್ನು , ಮತ್ತು ಸಮಾಜವನ್ನು ಬೆಳೆಸೋಣ
ಹೌದು..
ಪ್ರತ್ಯುತ್ತರಅಳಿಸಿಪ್ರಕೃತಿ ಮತ್ತು ಪೋಶಣೆ ಪ್ರತಿ ಜೀವಿಯ ಬೆಳವಣಿಗೆಯಲ್ಲೂ ಮುಖ್ಯ ಅ೦ಶ.ಅನುಭವದ ಮಾತುಗಳು ಎ೦ದೂ ಸುಳ್ಳಾಗದು...
Thank u very much ....
ಪ್ರತ್ಯುತ್ತರಅಳಿಸಿ