Pages

ಶನಿವಾರ, ಜೂನ್ 11, 2011

ಸೂತ್ರಧಾರಿ



"ಅಮ್ಮ"
 ನಿನ್ನ ತೋಳಿನ ಬಂದನ..
ಆಯಿತು ನನ್ನ ಮನ ನಂದನ 
ಮರೆಯಾಲಾರೆ ಆ ಅಲಿಂಗನ..
ಆಹಾ! ಅದುವೇ ಮಧುರ ರೋಮಂಚನ...


ಹೆಜ್ಜೆಯನಿಟ್ಟೆ ನಿನ್ನ ಹೆಜ್ಜೆಯ ಮೇಲೆ 
ತೋರಿಸಿದೆ ನಕ್ಷತ್ರ ಆಕಾಶದ ಮೇಲೆ 
ಸತಾಯಿಸಿದ್ದೆ  ಅಂದು ತೋರಿಸಿ  ನನ್ನ ಬಾಲ್ಯಲೀಲೆ 
ಆದರೂ ನೀ ಸುರಿಸಿದೆ  ಪ್ರೀತಿಯ ಸುರಿಮಳೆ .....

ನಿನ್ನ ಕೈ ತುತ್ತು ನೀಡಿದೆ 
ನನ್ನ ಕೈ ತಿದ್ದಿ ತೀಡಿದೆ
ನಾ ನಿನ್ನ ಶಿಕ್ಷಾರ್ಥಿಯಾದೆ 
ನಿನ್ನ ಗದರಿಕೆಗೆ ಗುರಿಯಾದೆ


ಗೊತ್ತಗಲಿಲ್ಲ ನಿನ್ನ ಗದರಿಕೆಯ ಗುಟ್ಟು 
ಈಗಾಗಿದೆ ಆ ನಿನ್ನ ಗುಟ್ಟು ರಟ್ಟು 
ಕೇಳುವರು ಎಲ್ಲಾ ನನ್ನ ಯಶಸ್ಸಿನ ಗುಟ್ಟು
ಮಾಡುವುದು ನನ್ನ ಕೈ ನಿನಗೆ ಬೊಟ್ಟು 


"ಅಮ್ಮ"
   ಇದು ನಿನ್ನ ಕಂದನ ಕರುಳಿನ
   ಕರೆಯೋಲೆ
  ನಿನ್ನ ನೆನಪು ನಿರಂತರ! ಚಿರಂತರ !
    ಮಧುರ ! ಸುಮಧುರ !




{ಬ್ಲಾಗ್ ಮಿತ್ರ ಪ್ರದೀಪ್ ಸಲಹೆಯಂತೆ ಎರಡು ಸಾಲುಗಳನ್ನು ಬದಲಾಯಿಸಿದ್ದೇನೆ  }
ಧನ್ಯವಾದಗಳು ಪ್ರದೀಪ್
ಚಿತ್ರ ಕೃಪೆ: ಅಂತರ್ಜಾಲ

13 ಕಾಮೆಂಟ್‌ಗಳು:

  1. ಚೆಂದದ ಸಾಲುಗಳು ಆಶಾರವರೇ..

    ಆದರೆ ಕೆಳಗಿನೆರಡು ಸಾಲುಗಳಲ್ಲಿ ಪದಗಳು ಏಕೋ ಸ್ವಲ್ಪ ಸರಿಹೊಂದುತ್ತಿಲ್ಲ ಎಂಬ ಅನಿಸಿಕೆ ಮೂಡಿತು..
    "ಸತಾಯಿಸಿದೆ ಆಡಿಸಿ ನನ್ನ ಬಾಲ್ಯಲೀಲೆ "
    "ಮಾಡುವುದು ನನ್ನ ಕೈ ತೋರಿಸಿ ನಿನ್ನ ಬೊಟ್ಟು"

    ಮಿಕ್ಕಂತೆ ಎಲ್ಲಾ ಚೆನ್ನಾಗಿದೆ!

    ಪ್ರತ್ಯುತ್ತರಅಳಿಸಿ
  2. ಪ್ರದಿಪ್,
    ನನ್ನ ಯಶಸ್ಸಿನ ಹಿಂದೆ ಅಮ್ಮ ನೀನೆ ಎಂದು ಎಲ್ಲರಿಗು ನಿನ್ನನ್ನೆ ಬೊಟ್ಟು ಮಾಡಿ ತೋರಿಸುವೆ ಎಂದಾಗಿತ್ತು.
    ನಿಮ್ಮ ಅನಿಸಿಕೆ, ಸಲಹೆಗೆ ಸ್ವಾಗತ... ಹಾಗು ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ವಿಜಯ ನಿಮ್ಮ ಪ್ರತಿಕ್ರಿಗೆ ದನ್ಯವಾದಗಳು ... ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ... ಬರುತ್ತಿರಿ

    ಪ್ರತ್ಯುತ್ತರಅಳಿಸಿ
  4. ಅಮ್ಮ-ಮಗುವಿನ ಸ೦ಬ೦ಧ ದೈವೀಕವಾದದ್ದು. ಆಪ್ತತೆಯ ಪರಾಕಾಷ್ಟೆಯ ಭಾವ ಅದು. ಭಾವಕ್ಕೆ ನ್ಯಾಯ ಒದಗಿಸಿದ್ದೀರಿ. ಅಭಿನ೦ದನೆಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ
  5. ಅಮ್ಮ ಅನ್ನೋ ಪದದ ಶಕ್ತಿಯೇ ಹಾಗೆ....
    ಅದು ನಮ್ಮಲ್ಲಿ ನಿರಂತರ ಸ್ಪಂದನ ನೀಡುವ ಜೀವಿಕೆ.....
    ಅಮ್ಮನ ಬಗ್ಗೆ ಎಷ್ಟು ಬರೆದರೂ ಅದು ಸ್ವಲ್ಪವೇ ಎಂದೆನಿಸುತ್ತದೆ.
    ಕವನ ಚನ್ನಾಗಿದೆ...

    ಶುದ್ಧ ಮಗು ಬರೆದಂತೆಯೇ ಇದೆ...
    ಮುಂದುವರೆಯಲಿ.....

    ಪ್ರತ್ಯುತ್ತರಅಳಿಸಿ